ಪ್ರಲ್ಹಾದ ಜೋಶಿಯವರ “ಅರ್ಧ ವಯಸ್ಸಿನ” ವಿನೋದ ಅಸೂಟಿ: 1962 ಮತ್ತೂ 1990…!!!

ಧಾರವಾಡ: ಲೋಕಸಭಾ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಕಿರಿಯ ವಯಸ್ಸಿನ ಯುವಕ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ವಿನೋದ ಅಸೂಟಿ ಜನಿಸಿದ್ದು ಏಪ್ರಿಲ್ 17, 1990. ಧಾರವಾಡ ಜಿಲ್ಲೆಯ ಲೋಕಸಭೆ ಚುನಾವಣೆ ಎದುರಿಸುತ್ತಿರುವ ಕಿರಿಯರಾಗಿದ್ದಾರೆ.
ಭಾರತೀಯ ಜನತಾ ಪಕ್ಷದಿಂದ ನಾಲ್ಕು ಬಾರಿ ಸತತವಾಗಿ ವಿಜಯಮಾಲೆ ಧರಿಸಿರುವ ಪ್ರಲ್ಹಾದ ಜೋಶಿಯವರು ನವೆಂಬರ್ 27, 1962ರಲ್ಲಿ ಜನಿಸಿದ್ದಾರೆ. ಈ ಬಾರಿ ಇವರು ತಮ್ಮ ಅರ್ಧ ವಯಸ್ಸಿನ ಅಭ್ಯರ್ಥಿಯನ್ನ ಎದುರಿಸುತ್ತಿದ್ದಾರೆ.