ಯುವ ಮೋರ್ಚಾ “ಬಿಜೆಪಿಯ ಹೆಮ್ಮೆ”- ಸಚಿವ ಶಂಕರ ಪಾಟೀಲ ಮುನೇನಕೊಪ್ಪ…
1 min readಯುವ ಸಮೂಹದ ಗೌರವ ಹೆಚ್ಚಿಸುವ ಕೆಲಸ ಮಾಡುವೆ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷವನ್ನ ನಿರಂತರವಾಗಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಬಿಜೆಪಿಯ ಯುವ ಮೋರ್ಚಾ ಪಾತ್ರ ಮಹತ್ವದ್ದಾಗಿದ್ದು, ಅವರ ಏಳಿಗೆಗಾಗಿ ಸದಾಕಾಲ ನಾನು ಜೊತೆಗಿರುವೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬಿಜೆಪಿಯ ಯುವ ಮೋರ್ಚಾ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ವಿಕಾಸ ತೀರ್ಥ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿ ಸಚಿವರು ಮಾತನಾಡುತ್ತಿದ್ದರು.
ಕೇಂದ್ರ ಸರಕಾರ ಎಂಟು ವರ್ಷದ ಸಾಧನೆಯನ್ನ ಜನರಿಗೆ ತಿಳಿಸುವ ಜೊತೆಗೆ ನಾವೂ ಮುಂದಿನ 800 ವರ್ಷಗಳವರೆಗೂ ಬಿಜೆಪಿ, ದೇಶದಲ್ಲಿ ರಾರಾಜಿಸಬೇಕೆಂಬ ಸಂಕಲ್ಪ ಹೊಂದಬೇಕು. ಹಾಗೇ, ಯುವ ಮೋರ್ಚಾದ ಪ್ರತಿಯೊಬ್ಬರೂ ಪ್ರತಿ ಮನೆಗೂ ಮಾಡಿರುವ ಕೆಲಸವನ್ನ ಮುಟ್ಟಿಸಬೇಕೆಂದು ಕರೆ ನೀಡಿದರು.
ಯುವ ಮೋರ್ಚಾ ಬಹಳಷ್ಟು ಹುಮ್ಮಸ್ಸಿನಿಂದ ಪಕ್ಷವನ್ನ ಬೆಳೆಸುತ್ತ ಸಾಗಿದೆ. ಹೀಗಾಗಿ ಯುವ ಮೋರ್ಚಾದ ಪ್ರತಿಯೊಬ್ವರು ಬೆಳೆಸುವ ಜವಾಬ್ದಾರಿ ನನ್ನ ಮೇಲಿದ್ದು, ಅದನ್ನ ಕ್ಷೇತ್ರದ ಮಗನಾಗಿ ನಾನು ನಿರ್ವಹಿಸುತ್ತೇನೆ ಎಂದು ಸಚಿವರು ಹೇಳಿದರು.
ಕ್ಷೇತ್ರದಲ್ಲಿ ಯುವಕರಿಗಾಗಿಯೇ ಹಲವು ಯೋಜನೆಗಳು ಸಾಕಾರಗೊಳ್ಳುತ್ತಿವೆ. ಯುವಕರ ಆರೋಗ್ಯಕ್ಕಾಗಿ ಬೇಕಾಗುವ ಸಕಲ ಸವಲತ್ತು ನೀಡಲಾಗುತ್ತಿದೆ. ಸರಕಾರಿ ಶಾಲೆಗಳನ್ನ ಹಲವು ರೀತಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದರು.
ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕಿಮ್ಸ್‌ನ ನಾಮನಿರ್ದೇಶಿತ ಸದಸ್ಯ ರಾಜಶೇಖರ ಕಂಪ್ಲಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರ ಕೋಮಾರದೇಸಾಯಿ, ಯುವ ಮೋರ್ಚಾ ತಾಲೂಕ ಅಧ್ಯಕ್ಷ ರೋಹಿತ ಮತ್ತಿಹಳ್ಳಿ, ಸಂತೋಷ ಜೀವನಗೌಡರ, ಪರಮೇಶ್ವರ ಯಡ್ರಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸ್ವತಃ ಬೈಕ್ ಚಲಾಯಿಸಿ ರ‌್ಯಾಲಿಯಲ್ಲಿ ಭಾಗವಹಿಸಿದ್ದರು.