ಯತ್ನಾಳರನ್ನ ಮೊದ್ಲು ಹೊರ ಹಾಕಿ, ಇಲ್ಲದಿದ್ರೇ “ಬಿಜೆಪಿ”ಗೆ ಪರ್ಯಾಯ ಪಕ್ಷ- ಹೊಸ ಬಾಂಬ್ ಸಿಡಿಸಿದ “ಲಿಂಗಾಯತ ನಾಯಕ”….

ಧಾರವಾಡ: ಭಾರತೀಯ ಜನತಾ ಪಕ್ಷದಿಂದ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನ ತಕ್ಷಣವೇ ಉಚ್ಚಾಟನೆ ಮಾಡಬೇಕು. ಇಲ್ಲದಿದ್ದರೇ, ಇವರ ಷಢ್ಯಂತ್ರಕ್ಕೆ ಬಿಜೆಪಿ ಹಾಳಾಗುತ್ತದೆ ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡ ನಾಗನಗೌಡ ನೀರಲಗಿಪಾಟೀಲ ಎಚ್ಚರಿಸಿದ್ದಾರೆ.
ಯತ್ನಾಳ ಅವರು ಪಂಚಮಸಾಲಿ ಸಮುದಾಯದ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹೊರತೂ, ಪಂಚಮಸಾಲಿ ಸಮಾಜಕ್ಕೆ ಏನು ಮಾಡಿಯೇ ಇಲ್ಲ. ಇಂತಹ ಸಮಯದಲ್ಲಿ ಇವರನ್ನ ಪಕ್ಷದಲ್ಲಿ ಇಟ್ಟುಕೊಳ್ಳುವುದು ಅವಶ್ಯಕತೆಯಿಲ್ಲ ಎಂದಿದ್ದಾರೆ.
ಈಗೀನ ಕಾಂಗ್ರೆಸ್ ಸರಕಾರ ಇಬ್ಭಾಗವಾದರೇ, ಸಿದ್ಧರಾಮಯ್ಯನವರ ಜೊತೆಗೆ ರಮೇಶ ಜಾರಕಿಹೊಳಿ ಸೇರಿಕೊಂಡು ಹೊಸ ಸರಕಾರ ರಚನೆ ಮಾಡ್ತಾರೆ. ಇದರ ಭಾಗವಾಗಿ ಯತ್ನಾಳ ಮಾತನಾಡುತ್ತಿದ್ದಾರೆಂದು ಪಾಟೀಲರು ಛೇಡಿಸಿದ್ದಾರೆ.
ಉತ್ತರಕರ್ನಾಟಕದಲ್ಲಿ ಹೊಸದೊಂದು ಪಕ್ಷ ಕಟ್ಟುವ ಹುನ್ನಾರವಾಗಿ ಯತ್ನಾಳ ಮಾತನಾಡುತ್ತಿದ್ದಾರೆ. ಈ ಹಿಂದೆ ಹೆಬ್ಬಳ್ಳಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಏನು ನಡೆದಿದೆ ಎಂಬುದನ್ನ ಮಾಜಿ ಶಾಸಕ ಅಮೃತ ದೇಸಾಯಿಯವರಿಗೆ ಗೊತ್ತಿದೆ. ಎಲ್ಲೇಲ್ಲಿ ಯತ್ನಾಳ ಪ್ರಚಾರ ಮಾಡಿದ್ದಾರೋ ಅಲ್ಲೆಲ್ಲಾ ಪಕ್ಷ ಸೋತಿದೆ ಎಂದು ನೀರಲಗಿಪಾಟೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.