ಬಿಜೆಪಿ ಉಪಾಧ್ಯಕ್ಷರಿಗೂ ಕೊರೋನಾ ಪಾಸಿಟಿವ್
1 min readಕಲಬುರಗಿ: ರಾಜ್ಯದಲ್ಲಿ ದಿನೇ ದಿನೇ ಹಬ್ಬುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣಗಳು ರಾಜಕಾರಣಿಗಳನ್ನ ಬಿಡುತ್ತಿಲ್ಲವಾಗಿದೆ. ರಾಜ್ಯದ ಹಲವು ರಾಜಕಾರಣಿಗಳಿಗೆ ಈಗಾಗಲೇ ಕೊರೋನಾ ಪಾಸಿಟಿವ್ ಬಂದಿದ್ದು, ಅದಕ್ಕೀಗ ಹೊಸ ಸೇರ್ಪಡೆಯಾಗಿದ್ದು ಬಿಜೆಪಿ ರಾಜ್ಯ ಉಪಾಧ್ಯಕ್ಷರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಟ್ವೀಟ್ ಮಾಡಿಕೊಂಡಿರುವ ಗುತ್ತೇದಾರ ಹೋಂ ಕ್ವಾರಂಟೈನಗೆ ಒಳಗಾಗಿದ್ದಾರೆ. ಕಲಬುರಗಿಯಲ್ಲಿರುವ ತಮ್ಮ ನಿವಾಸದಲ್ಲೇ ಚಿಕಿತ್ಸೆಗೆ ಒಳಗಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ತಮ್ಮ ಜೊತೆ ಸಂಪರ್ಕಕ್ಕೆ ಬಂದವರು ತಪಾಸಣೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿರುವ ಗುತ್ತೆದಾರ, ಯಾವುದೇ ಕಾರಣಕ್ಕೂ ಭಯ ಬೀಳಬಾರದೆಂದು ಮನವಿ ಮಾಡಿಕೊಂಡಿದ್ದಾರೆ.
ಕಲಬುರಗಿ ಪ್ರವಾಸ ಮುಗಿಸಿ ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲರಿಗೆ ಮೂರು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಇದೀಗ ಉಪಾಧ್ಯಕ್ಷರಿಗೂ ತಗುಲಿದೆ.