ವಾರ್ಡ್ 52ರಲ್ಲಿನ “ಸೀದಾ-ಸಾದಾ ಅಭ್ಯರ್ಥಿಗೆ” ಜನ ಬೆಂಬಲ…!
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವಾರ್ಡ್ 52ರಲ್ಲಿನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಉಮೇಶ ದುಶಿಯವರಿಗೆ ಜನ ಬೆಂಬಲ ದೊರಕುತ್ತಿದ್ದು, ಯುವಕರಿಗೆ ಪ್ರಾಧಾನ್ಯತೆ ಕೊಡುವ ಮಾತುಗಳನ್ನಾಡುತ್ತಿದ್ದಾರೆ.
ವಾರ್ಡ್ ಸಂಖ್ಯೆ 52ರಲ್ಲಿನ ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ ದುಶಿಯವರು ಸದಾಕಾಲ, ಜನಪರ ಕಾಳಜಿಯಿಂದ ಸೇವೆ ಮಾಡುತ್ತ ಬಂದಿದ್ದಾರೆ. ತಮ್ಮ ಬಹುತೇಕ ಸಮಯವನ್ನ ಜನರಿಗಾಗಿ ಕಳೆಯುತ್ತಿದ್ದಾರೆ.
ಇಂತಹ ವ್ಯಕ್ತಿಯನ್ನ ಗುರುತಿಸಿ ಬಿಜೆಪಿ ಟಿಕೆಟ್ ನೀಡಿರುವುದು ವಾರ್ಡನ ಜನರಲ್ಲಿಯೂ ಸಂತಸ ಮೂಡಿಸಿದೆ. ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿಯವರು ಈ ಹಿಂದೆ ಮಾಡಿರೋ ಕೆಲಸವಾದರೂ ಏನು ಎಂಬ ಪ್ರಶ್ನೆಯನ್ನ ಸ್ಥಳೀಯರು ಕೇಳುವಂತಹ ಸ್ಥಿತಿಯಿದೆ.
ಪಕ್ಷದಲ್ಲಿ ನಿರಂತರವಾಗಿ ಗುರುತಿಸಿಕೊಂಡು ಬಂದಿರುವ ಉಮೇಶ ದುಶಿ ಅವರು ಸಾಮಾಜಿಕ ಬದ್ಧತೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ವಾರ್ಡ್ ನ ಮೂಲೆ ಮೂಲೆಯಲ್ಲೂ ಜನಬೆಂಬಲ ದೊರಕುತ್ತಿದೆ.