ಉಮೇಶ ದುಶಿ ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ: ಶಿಸ್ತಿನ ಸಿಪಾಯಿಗೆ ಒಲಿದ ಪಟ್ಟ
ಹುಬ್ಬಳ್ಳಿ: ಪಕ್ಷದ ಸಂಬಂಧ ಹಗಲಿರುಳು ಶ್ರಮವಹಿಸುವ ಪಕ್ಷದ ಶಿಸ್ತಿನ ಸಿಪಾಯಿಯಂದೇ ಹೆಸರುವಾಸಿಯಾಗಿರುವ ಉಮೇಶ ದುಶಿ ಅವರನ್ನ ಬಿಜೆಪಿಯ ಮಹಾನಗರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಆದೇಶ ಹೊರಡಿಸಿದ್ದಾರೆ.
ಪಕ್ಷದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ, ಪಕ್ಷದ ಕಾರ್ಯಕರ್ತರು ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆಯನ್ನ ಮಾಡಬೇಕೆಂದು ಅರವಿಂದ ಬೆಲ್ಲದ ಬಯಸಿದ್ದಾರೆ.
ಉಮೇಶ ದುಶಿ, ಭಾರತೀಯ ಜನತಾ ಪಕ್ಷಕ್ಕಾಗಿ ಹಗಲಿರುಳು ದುಡಿದು ಯಾವುದೇ ಹುದ್ದೆಯನ್ನ ಬಯಸದೇ ಕಾರ್ಯನಿರ್ವಹಣೆ ಮಾಡಿದ್ದರು. ಅವರ ಜೊತೆಗಿದ್ದವರೂ ಪ್ರಮುಖ ಸ್ಥಾನಗಳಿಗೆ ಹೋದಾಗಲೂ ತಾವಾಯಿತು ಪಕ್ಷ ಸಂಘಟನೆಯಾಯಿತು ಎಂದುಕೊಂಡು ಇದ್ದವರು. ಉಮೇಶ ದುಶಿಗೆ ಹುದ್ದೆ ನೀಡಿರುವುದಕ್ಕಿಂತ ಪಕ್ಷ ಈಗಲಾದರೂ ಉತ್ತಮರನ್ನ ಪರಿಗಣನೆಗೆ ತೆಗೆದುಕೊಂಡಿದೆ ಎಂಬ ಭಾವನೆ ಬಹುತೇಕರಲ್ಲಿ ಮೂಡಿದೆ.