ಅಷ್ಟಗಿಯವರನ್ನ “ಬಯಲುಸೀಮೆ ಖುರ್ಚಿಯಲ್ಲಿ” ಕೂಡಿಸಿದ ಶಾಸಕ ಅಮೃತ ದೇಸಾಯಿ…

ಚಿತ್ರದುರ್ಗ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ತವನಪ್ಪ ಅಷ್ಟಗಿಯವರಿಗೆ ಪ್ರಮುಖವಾದ ಸ್ಥಾನಮಾನ ಕೊಡಿಸಲು ಪಣತೊಟ್ಟಿದ್ದ ಶಾಸಕ ಅಮೃತ ದೇಸಾಯಿ, ಅದರಲ್ಲಿ ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಅವರನ್ನ ಇಂದು ಸ್ವತಃ ಕರೆದುಕೊಂಡು ಹೋದ ಶಾಸಕ ಅಮೃತ ದೇಸಾಯಿ ಅವರು, ಓರ್ವ ಹಿರಿಯರಿಗೆ ಕೊಡಬೇಕಾದ ಗೌರವವನ್ನ ನೀಡಿದ್ದಾರೆ.

ಈ ಸಮಯದಲ್ಲಿ ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಪಾಲಿಕೆ ಸದಸ್ಯ ನಿತಿನ ಇಂಡಿ, ಶ್ರೀನಿವಾಸ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಭಾರತೀಯ ಜನತಾ ಪಕ್ಷದ ತವನಪ್ಪ ಅಷ್ಟಗಿಯವರು ಧಾರವಾಡ-71 ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ಈ ಬಾರಿ ಅವರಿಗೆ ಶಾಸಕ ಅಮೃತ ದೇಸಾಯಿ ಮಹತ್ವದ ಹುದ್ದೆ ಕೊಡಿಸಿದ್ದಾರೆ. ಇದಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹಕಾರವೂ ಲಭಿಸಿದೆ.