ಮಾಜಿ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರನ್ನ ಪಕ್ಷದಿಂದ ಉಚ್ಚಾಟಿಸಿದ ಶಾಸಕ ಅರವಿಂದ ಬೆಲ್ಲದ…!

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯ ಕಾವು ಪ್ರತಿ ದಿನವೂ ಏರುತ್ತಿರುವ ಸಮಯದಲ್ಲಿಯೇ ಪಕ್ಷಕ್ಕೆ ತೊಡೆ ತಟ್ಟಿ ಪಕ್ಷೇತರ ಚುನಾವಣೆ ಮಾಡಲು ಮುಂದಾಗಿದ್ದ ಹಲವರಿಗೆ ಭಾರತೀಯ ಜನತಾ ಪಕ್ಷ ಕೂಡಾ, ಪಕ್ಷದಿಂದ ಉಚ್ಚಾಟನೆ ಮಾಡುವ ಮೂಲಕ ಖಡಕ್ ಉತ್ತರ ನೀಡಿದೆ.

ಮಾಜಿ ಮೇಯರ ಮಂಜುಳಾ ಅಕ್ಕೂರ, ಉಪ ಮೇಯರ್ ಲಕ್ಷ್ಮೀ ಉಪ್ಪಾರ, ಮಾಜಿ ಸದಸ್ಯರುಗಳಾದ ಲಕ್ಷ್ಮಣ ಉಪ್ಪಾರ, ಹೂವಪ್ಪ ದಾಯಗೋಡಿ, ಸೇರಿದಂತೆ ಉಪ್ಪಾರ ದಂಪತಿಗಳ ಪುತ್ರ ಕಿರಣ ಉಪ್ಪಾರ, ಶಶಿಕಾಂತ ಬಿಜವಾಡ ಸೇರಿದಂತೆ ಒಟ್ಟು 16 ಜನರನ್ನ ಪಕ್ಷದಿಂದ 6 ವರ್ಷಕ್ಕೆ ಉಚ್ಚಾಟನೆ ಮಾಡಿ, ಮಹಾನಗರ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ ಆದೇಶ ಹೊರಡಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕಾಗಿ ತಮ್ಮೀಡಿ ಕುಟುಂಬವನ್ನ ಮೀಸಲಿಟ್ಟಿದ್ದ ಉಪ್ಪಾರ ಕುಟುಂಬಕ್ಕೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಲಕ್ಷ್ಮೀ ಉಪ್ಪಾರ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.