ಬಿಜೆಪಿ ಶಾಸಕನ ಪ್ರಚಾರ ಗೀಳು: ಬಡವರಿಗೆ ಕೊಡೋದಕ್ಕೂ ಸ್ಟಿಕರ್ ಅಂಟಿಸಿದ ಶಾಸಕ

ಹಾವೇರಿ: ಕೊರೋನಾ ವೈರಸ್ ಭೀತಿಯಲ್ಲೂ ಪ್ರಚಾರಕ್ಕೆ ಮಹತ್ವ ಕೊಡುತ್ತಿರುವ ರಾಣೆಬೆನ್ನೂರು ಶಾಸಕರ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದ್ದು, ಹಲವರು ಶಾಸಕರ ಕ್ರಮಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ.
ಬಡವರು, ನಿರ್ಗತಿಕರಿಗೆ ನೀಡುವ ದಿನಸಿ ಪ್ಯಾಕೇಟ್ ಗಳ ಮೇಲೆ ತಮ್ಮ ಭಾವಚಿತ್ರ ಹಾಕಿಸಿಕೊಂಡಿರುವ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ಇಂಥಹ ಸಮಯದಲ್ಲೂ ಪ್ರಚಾರಕ್ಕೆ ಮುಂದಾಗಿರುವುದು ಅನೇಕರಲ್ಲಿ ಅಸಹ್ಯ ಮೂಡಿಸಿದೆ.
ಈಗಾಗಲೇ ಶಾಸಕರಾಗಿದ್ದರೂ ಭಾವಚಿತ್ರ ಹಾಕಿಸಿಕೊಳ್ಳುವ ಉಮೇದಿಯ ಬಗ್ಗೆ ಪ್ರಜ್ಞಾವಂತರು ಬೇಸರಗೊಂಡಿದ್ದು, ಮತಕ್ಷೇತ್ರದಲ್ಲಿ ಬೇರೆಯದ್ದೇ ವಾತಾವರಣ ಮೂಡಿಸಿದೆ.