ಬಿಜೆಪಿಯಲ್ಲಿ “ಸಿಮೆಂಟ್ ತೆಂಗಿನಕಾಯಿ” ಯಾರು…!?

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಡೆಯುತ್ತಿದ್ದು, ಇಲ್ಲಿಯೇ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಮೆಂಟ್ ತೆಂಗಿನಕಾಯಿ ಅವರು ಪತ್ರಿಕಾಗೋಷ್ಠಿಯನ್ನ ನಡೆಸುತ್ತಿದ್ದಾರಂತೆ.
ಭಾರತೀಯ ಜನತಾ ಪಕ್ಷದ ವಕ್ತಾರ ರವಿ ನಾಯಕ ಅವರು ಕಳಿಸಿರುವ ಮಾಧ್ಯಮ ಸಂದೇಶ ಹೀಗಿದೆ ನೋಡಿ…
28/12/2021] BJ Ravi Naik: ಪತ್ರಿಕಾಗೋಷ್ಠಿಗೆ ಆವ್ಹಾನ ಈಗ 1:40 ನಿಮಿಷಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಮೆಂಟ್ ತೆಂಗಿನಕಾಯಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವರು ಮಾಧ್ಯಮ ಬಂಧುಗಳು ಆಗಮಿಸಲು ವಿನಂತಿ ರವಿ ನಾಯಕ್
ಸ್ಥಳ ಡೆನಿಸನ್ಸ್ ಹೋಟೆಲ್ ಮಾಧ್ಯಮ ಕೊಠಡಿ ಯಲ್ಲಿ..
ನಂತರ ಕೆಲವು ನಿಮಿಷಗಳ ನಂತರ ಎಚ್ಚೆತ್ತ ವಕ್ತಾರ ರವಿ ನಾಯಕ ಅವರು ಮತ್ತೊಂದು ಸಂದೇಶ ಕಳಿಸಿದ್ರು.. ಆವಾಗಲೇ ಸತ್ಯ ಗೊತ್ತಾಗಿದೆ. ಅವರು ಸಿಮೆಂಟ್ ತೆಂಗಿನಕಾಯಿ ಅಲ್ಲಾ.. ಮಹೇಶ ತೆಂಗಿನಕಾಯಿ ಅಂತಾ..
28/12/2021] BJ Ravi Naik: ಮಾಧ್ಯಮ ಬಂಧುಗಳು ಕ್ಷಮಿಸಬೇಕು
ಮಧ್ಯಾಹ್ನ 1.40 ಶ್ರೀ ಮಹೇಶ್ ತೆಂಗಿನಕಾಯಿ ರವರ ಪತ್ರಿಕಾಗೋಷ್ಠಿ

ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದಾಗಲೇ ಇಂತಹ ಯಡವಟ್ಟು ನಡೆದಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿತ್ತು.
ಸಮಯದಲ್ಲಿ ಬದಲಾವಣೆ
ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ತೆಂಗಿನಕಾಯಿ ರವರ ಪತ್ರಿಕಾಗೋಷ್ಠಿಯ 2: 20 ನಿಮಿಷಕ್ಕೆ ನಡೆಯಲಿದೆ ಧನ್ಯವಾದಗಳು