ಪದವೀಧರ-ಶಿಕ್ಷಕ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ- ಸಂಕನೂರ ಕನ್ ಫರ್ಮ್
 
        ನವದೆಹಲಿ: ಕರ್ನಾಟಕದ ಎರಡು ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಗೆ ನಡೆಯುವ ವಿಧಾನಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ.
ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಚಿದಾನಂದ ಎಂ.ಘೋಡಾ, ಎಸ್.ವಿ.ಸಂಕನೂರ, ಶಶೀಲ್ ನಮೋಸಿ ಹಾಗೂ ಪುಟ್ಟಣ ಅವರಿಗೆ ಮತ್ತೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಅಧಿಕೃತವಾದ ಆದೇಶವನ್ನ ಹೊರಹಾಕಿರುವ ಬಿಜೆಪಿ ಬಹುತೇಕ ಹಳಬರಿಗೆ ಮತ್ತೆ ಅವಕಾಶವನ್ನ ನೀಡಿದೆ. ಎಸ್.ವಿ.ಸಂಕನೂರ ಅವರಿಗೆ ಟಿಕೆಟ್ ಸಿಗಬಾರದೆಂದು ಬಿಜೆಪಿಯಲ್ಲಿ ಹಲವರು ಪ್ರಯತ್ನ ಪಟ್ಟಿದ್ದರಾದರೂ, ಪಕ್ಷ ಮತ್ತೆ ಅವರಿಗೆ ಮಣೆ ಹಾಕಿದೆ.
 
                       
                       
                       
                       
                      
 
                        

 
                 
                 
                