ಧಾರವಾಡದ ಬಿಜೆಪಿ ಶಾಸಕರಿಗೆ ತಮ್ಮದೇ ಸರಕಾರದ ಆದೇಶಗಳು ಅನ್ವಯಿಸಲ್ಲ: ಶಾಣ್ಯಾರ ಶಾಣ್ಯಾತನ
ಧಾರವಾಡ: ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಯಾವುದೇ ಆದೇಶಗಳು ಅದೇ ಪಕ್ಷದ ಶಾಸಕರೋರ್ವರಿಗೆ ಅನ್ವಯಿಸುವುದೇ ಇಲ್ಲ. ಕೊರೋನಾ ಸಮಯದಲ್ಲಿ ಪಾಲಿಸಬೇಕಾದ ಯಾವುದೇ ಆದೇಶಗಳನ್ನ ಬಿಜೆಪಿ ಶಾಸಕರು ಪಾಲಿಸದೇ ಮುನ್ನಡೆದಿರುವುದು ಪ್ರಜ್ಞಾವಂತರನ್ನ ಹುಬ್ಬೇರಿಸುವಂತೆ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕೇತ್ರದ ಶಾಸಕ ಅರವಿಂದ ಬೆಲ್ಲದರಿಗೆ ರಾಜ್ಯ ಸರಕಾರದ ತೀರ್ಮಾನಗಳು ಅನ್ವಯಿಸಲ್ಲ ಎನ್ನುವ ಹಾಗೇ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರ್ಯಕ್ರಮ ನಡೆಸಬಾರದೆಂದು ಹೇಳಿದರೂ ಕಾರ್ಯಕ್ರಮ ಆಯೋಜನೆಯಾಗುತ್ತಿವೆ. ಆಗ, ಮಾಸ್ಕ್ ಧರಿಸುವುದಾಗಲಿ, ಸೋಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡುವುದಾಗಲಿ ಇವರಿಗೆ ಸಂಬಂಧವೇ ಇಲ್ಲವೆನ್ನುವಂತಾಗಿದೆ. ಜಿಲ್ಲೆಯಲ್ಲಿಯೇ ಸುಸಂಸ್ಕೃತ ರಾಜಕಾರಣಿ ಎಂದು ಕರೆಸಿಕೊಳ್ಳುವ ಅರವಿಂದ ಬೆಲ್ಲದರು ಸರಕಾರದ ಆದೇಶಗಳನ್ನೇ ಗಾಳಿಗೆ ತುರುತಿರುವುದು ಬಹುತೇಕರಲ್ಲಿ ಅಸಹ್ಯ ಮೂಡಿಸಿದೆ.
ಕೆಸಿಡಿ ಕಾಲೇಜಿನಲ್ಲಿ ಪದವಿಪೂರ್ವ ಜೀವಶಾಸ್ತ್ರ ವಿಭಾಗದ ಕೊಠಡಿ ಮತ್ತು ಪ್ರಯೋಗಾಲದ ಉದ್ಘಾಟನೆಯನ್ನ ಮಾಡಿದ್ದಾರೆ. ಅಲ್ಲಿ ಕಾಲೇಜಿನ ಪ್ರಿನ್ಸಿಪಾಲರು, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಭಾಗವಹಿಸಿದ್ದಾರೆ. ಯಾರೋಬ್ಬರು ಕೊರೋನಾ ವೈರಸ್ ಹರಡುವಿಕೆ ಬಗ್ಗೆ ಜಾಗೃತೆ ವಹಿಸದೇ ಸರಕಾರದ ಆದೇಶವನ್ನ ಧಿಕ್ಕರಿಸಿದ್ದಾರೆ.
ಯಾವುದೇ ಶಾಲಾ-ಕಾಲೇಜು ಆರಂಭ ಸಧ್ಯಕ್ಕಿಲ್ಲ ಎಂಬ ಸತ್ಯ ಗೊತ್ತಿದ್ದರೂ, ಉದ್ಘಾಟನೆ ಮಾಡಲಾಗಿದೆ. ಇವರು ಬಿಜೆಪಿಯಿಂದಲೇ ಗೆದ್ದು ಬಂದಿರುವ ಶಾಸಕರೇ ಅಥವಾ ಏನು.. ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತಿದೆಯೆನ್ನಲಾಗಿದೆ.