ಬಿಜೆಪಿ ಜಿಲ್ಲಾಧ್ಯಕ್ಷನಿಂದ ಪಿಎಸೈ ಮೇಲೆ ಹಲ್ಲೆ ಯತ್ನ: ಜಾಮೀನು ಪಡೆದ ಹೊರ ಬಂದ ಜಿಲ್ಲಾಧ್ಯಕ್ಷ
1 min readಮಂಡ್ಯ: ಕೊರೋನಾ ವಾರಿಯರ್ಸ್ ಮೇಲೆ ರಾಜಕೀಯ ಪುಡಾರಿಗಳಿಂದ ದೌರ್ಜನ್ಯ ಮುಂದುವರೆದಿದ್ದು, ಪತ್ರಕರ್ತರ ಮೇಲೆ ಆಯ್ತು ಈಗ ಪೊಲೀಸರ ಮೇಲೆ ದೌರ್ಜನ್ಯ ನಡೆದಿದೆ. ರಾಜಕೀಯ ಪುಡಾರಿಗಳಿಗೆ ಜೈಲಿಲ್ಲ, ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಕೆಆರ್‌ಪೇಟೆಯ ಪ್ರೊಬೇಷನರಿ ಪಿಎಸ್‌ಐ ನಿಖಿತಾ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್‌ರಿಂದ ದೌರ್ಜನ್ಯ ನಡೆದಿದೆ. ಮಂಗಳವಾರ ಸಂಜೆ ಏಳು ಗಂಟೆಯ ನಂತರ ಕೆಆರ್‌ಪೇಟೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ವಿಜಯ್‌ಕುಮಾರ್. ಈ ವೇಳೆ ವಿಜಯ್‌ಕುಮಾರ್ ಕಾರು ತಡೆದ ನಿಖಿತ. ಕಾರು ತಡೆದು ಈಗ ನಿಷೇಧಾಜ್ಞೆ ಇದೆ ಓಡಾಟ ಮಾಡಬಾರದು ಎಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ನಾನು ಬಿಜೆಪಿ ಜಿಲ್ಲಾಧ್ಯಕ್ಷ. ನನ್ನ ನೀನು ಕೇಳುವ ಹಾಗೆ ಇಲ್ಲ. ನಿನ್ನದು ಅತೀಯಾಗುತ್ತಿದೆ. ನೀನು ಪಿಎಸ್‌ಐ ಅಲ್ಲ ಇನ್ನೂ ಪ್ರೊಬೇಷನರಿ. ನಾನು ಬೇಕಿದ್ರೆ, ಸಿಎಂ, ಡಿಎಂ, ಡಿಸಿ, ಎಸ್‌ಪಿಗೆ ಕಾಲ್ ಮಾಡ್ತೀನಿ. ನೀನು ನನ್ನ ಮೇಲೆ ಹಲ್ಲೆ ಮಾಡಿದೆ ಎಂದು ದೂರು ನೀಡುತ್ತೇನೆ. ನಿನ್ನ ಕೆಲಸದಿಂದ ತೆಗೆಸುತ್ತೇನೆ ಎಂದು ವಿಜಯ್‌ಕುಮಾರ್ ಮಾತಾಡಿದ್ದಾರೆ. ವಿಜಯ್‌ಕುಮಾರ್ ನಿಖಿತ ಅವರ ಕೆಲಸಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಿಖಿತ ವಿಜಯ್‌ಕುಮಾರ್ ವಿರುದ್ಧ ಕೆಆರ್‌ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ವಿಜಯ್‌ಕುಮಾರ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಂತರ ಸ್ಟೇಷನ್ ಬೇಲ್‌ನಲ್ಲಿ ಕಳುಹಿಸಿದ್ದಾರೆ.