ಹುಬ್ಬಳ್ಳಿಯ ಬಿಜೆಪಿ ಮುಖಂಡನಿಂದ ಮಾವನ ಮಕ್ಕಳಿಗೆ “17 ಲಕ್ಷದ” ಟೋಪಿ…!?
1 min readಹುಬ್ಬಳ್ಳಿ: ತನ್ನ ಸೋದರಮಾವನ ಹೆಸರಿನಲ್ಲಿ ನಕಲಿ ಬಾಂಡ್ ಸೃಷ್ಟಿ ಮಾಡಿ, ಮಾವನ ಮಕ್ಕಳಿಗೆ ಭಾರತೀಯ ಜನತಾ ಪಕ್ಷದ ಮುಖಂಡನೋರ್ವ ತೊಂದರೆ ಕೊಡುತ್ತಿದ್ದಾನೆಂದು ಆರೋಪಿಸಿ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಳಿಯಂದಿರುವ ದೂರು ನೀಡಿದ ಘಟನೆ ನಡೆದಿದೆ.
ಸೆಂಟ್ರಲ್ ಕ್ಷೇತ್ರದ ಮುಖಂಡರೊಂದಿಗೆ ಸಂಪರ್ಕ ಹೊಂದಿರುವ ಸಂಗಮೇಶ ಗೌರಕ್ಕನವರ ಎಂಬ ಬಿಜೆಪಿ ಮುಖಂಡನೇ, ಗಂಗಾಧರ ವಾಲಿ ಎಂಬುವವರ ಕುಟುಂಬಕ್ಕೆ ಅನ್ಯಾಯ ಮಾಡಿ, 17 ಲಕ್ಷ 68 ಸಾವಿರ ಕೊಡುವಂತೆ ಪೀಡಿಸುತ್ತಿದ್ದಾನೆಂದು ಮೃತ ಗಂಗಾಧರ ವಾಲಿ ಅವರ ಪುತ್ರ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮೂಲತಃ ಕಾಂಗ್ರೆಸನಲ್ಲಿದ್ದ ಸಂಗಮೇಶ ಅಲಿಯಾಸ್ ಕುಮಾರ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಿಸಿಕೊಂಡು, ಬಿಜೆಪಿಗೆ ಸೇರಿದ್ದಾರೆಂದು ಹೇಳಲಾಗಿದೆ.
ಗಂಗಾಧರ ವಾಲಿಯವರು ತೀರಿಕೊಳ್ಳುವ ಮುನ್ನವೇ ಬಾಂಡವೊಂದನ್ನ ಮಾಡಿಕೊಂಡಿದ್ದು, ಅದರಲ್ಲಿ 10 ಲಕ್ಷ ರೂಪಾಯಿ ಕೈಗಡ ಎಂದು ಬರೆಯಲಾಗಿದೆ. ಒಂದು ವರ್ಷದಲ್ಲಿ ಅದರ ಬಡ್ಡಿ ಸಮೇತ 17 ಲಕ್ಷಕ್ಕೂ ಹೆಚ್ಚು ಹಣವನ್ನ ಕೊಡುವಂತೆ ಪೀಡಿಸುತ್ತಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಸಂಗಮೇಶ ಗೌರಕ್ಕನವರ, ಬಿಜೆಪಿ ಮುಖಂಡರ ಜೊತೆಗೂಡಿ ಇಂತಹ ದಂಧೆಗಳನ್ನ ಮಾಡುತ್ತಿದ್ದಾನೆಂದು ವಾಲಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ನಕಲಿ ಬಾಂಡಿಗೆ ಮೃತ ರಾಘವೇಂದ್ರ ರಾಮದುರ್ಗ ಅವರ ಸಹಿ ಕೂಡಾ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೋದರಮಾವನ ಮಕ್ಕಳು ಬಿಜೆಪಿ ಮುಖಂಡನ ಅಕ್ರಮದ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮುಂದೇನಾಗುತ್ತೆ ಎಂಬುದನ್ನ ಕಾದು ನೋಡಬೇಕಿದೆ.