ಬಿಜೆಪಿ ಯುವ ಮುಖಂಡ ಸೇರಿ 8ಜನರಿಗೆ ಜೈಲು ಶಿಕ್ಷೆ ಪ್ರಕಟ..!

ಮೈಸೂರು: ಬಾರ್ ನಲ್ಲಿ ಗಲಾಟೆ ಮಾಡಿ ಮಾಲೀಕರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮುಖಂಡ ಸೇರಿದಂತೆ 8 ಜನರಿಗೆ ಜೈಲು ಶಿಕ್ಷೆಯನ್ನ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಲಯ ಪ್ರಕಟಿಸಿದೆ.
ನಂಜನಗೂಡು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನರಾಜ್ ಸೇರಿದಂತೆ 8ಜನರಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ತೀರ್ಪು ಪ್ರಕಟಿಸಿದ್ದು, ಪ್ರಕರಣದಲ್ಲಿ ಧನರಾಜ ಎರಡನೇ ಆರೋಪಿಯಾಗಿದ್ದರು.
2016ರಲ್ಲಿ ನಂಜನಗೂಡಿನ ಅಕ್ಷಯ ಬಾರ್ ನಲ್ಲಿ ಗಲಾಟೆ ಮಾಡಿ ಹಲ್ಲೆ ನಡೆಸಿದ್ದ ಧನರಾಜ್ ಮತ್ತು 7ಜನ ಸ್ನೇಹಿತರು. ಬಿಜೆಪಿ ಯಲ್ಲಿ ಸಕ್ರಿಯನಾಗಿದ್ದ ಧನರಾಜ್, ನಟೇಶ್, ಕುಮಾರ್, ನಂಜಪ್ಪ, ದೇವರಾಜ್, ಮೂರ್ತಿ, ಕೃಷ್ಣ, ಮಂಜು ರವರಿಗೂ ಜೈಲು ಶಿಕ್ಷೆ ತೀರ್ಪು ನೀಡಲಾಗಿದೆ.
ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ 7500ರೂಪಾಯಿ ದಂಡವನ್ನ ವಿಧಿಸಿದ್ದು, ನ್ಯಾಯಾಧೀಶರಾದ ರಾಮಚಂದ್ರ.ಡಿ.ಹುದ್ದಾರ್ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಪಿಪಿ ಚಂದ್ರಶೇಖರ್ ವಾದ ಮಂಡಿಸಿದ್ದರು.