ಬಿಜೆಪಿ ಮುಖಂಡ ರಾಘವೇಂದ್ರ ರಾಮದುರ್ಗ ಹೃದಯಾಘಾತದಿಂದ ಸಾವು: ಹಿರಿಯ ಮುತ್ಸದಿ ಕಳೆದುಕೊಂಡ ಬಿಜೆಪಿ
ಹುಬ್ಬಳ್ಳಿ: ತೀವ್ರ ಎದೆನೋವು ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ ರಾಘವೇಂದ್ರ ರಾಮದುರ್ಗ ನಿಧನರಾಗಿದ್ದಾರೆ.
ವಿಶಿಷ್ಟ ವ್ಯಕ್ತಿತ್ವದ ರಾಘವೇಂದ್ರ ರಾಮದುರ್ಗ, ಕೆಲ ದಿನಗಳ ಹಿಂದಷ್ಟೇ ಕೊರೋನಾ ಮಹಾಮಾರಿಯ ವಿರುದ್ಧ ಹೋರಾಡಿ ಜಯಗಳಿಸಿ ಆರೋಗ್ಯವಾಗಿದ್ದರು. ಆದರೆ, ಇಂದು ಹೃದಯಾಘಾತವಾಗಿ ನಿಧನರಾಗಿದ್ದಾರೆ.
ರಾಘವೇಂದ್ರ ರಾಮದುರ್ಗ, ಕಲಾವಿದರು ಕೂಡಾ ಆಗಿದ್ದರು. ಅವರ ಸಾವು ರಾಜಕೀಯ ಮತ್ತು ಕಲಾರಂಗಕ್ಕೆ ತೀವ್ರ ನಷ್ಟವನ್ನುಂಟು ಮಾಡಿದೆ.
ರಾಘವೇಂದ್ರ ರಾಮದುರ್ಗ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಶಾಸಕ ಅಮೃತ ದೇಸಾಯಿ ಕಂಬನಿ ಮೀಡಿದಿದ್ದಾರೆ.