ಬಿಜೆಪಿ ಸರಕಾರವಿದ್ದಾಗಲೇ ನಂಗೇನು ಮಾಡ್ಲಿಲ್ಲಾ, ಹಳಬರನ್ನ ಕಡೆಗಣಿಸೋದು ಸರಿಯಲ್ಲ…

ಧಾರವಾಡ: ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿ ಇದ್ದಾಗಲೇ ನಂಗೇನು ಮಾಡಿಲ್ಲ, ಕಾಂಗ್ರೆಸ್ ಏನು ಮಾಡತ್ತೆ ಎನ್ನುವ ಮೂಲಕ ಬಿಜೆಪಿಯ ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ತಮ್ಮನ್ನ ಹೇಗೆ ನಡೆಸಿಕೊಂಡಿತು ಎಂಬುದನ್ನ ನಯವಾಗಿಯೇ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಸೀಮಾ ಮಸೂತಿಯವರು, ಕಾಂಗ್ರೆಸ್‌ಗೆ ಹೋಗುವುದಿಲ್ಲವೆಂದರು.
ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಸಿಗಬೇಕು. ಆದರೆ, ಹಳಬರನ್ನ ಮರೆಯಬಾರದು. ಪಕ್ಷದ ಸಂಘಟನೆಯನ್ನ ಮುಖಂಡರು ಮಾಡಬೇಕೆಂದರು.