ಮಹಾನಗರಕ್ಕೆ “ತಿಪ್ಪಣ್ಣ ಮಜ್ಜಗಿ”-ಗ್ರಾಮಾಂತರಕ್ಕೆ “ನಿಂಗಪ್ಪ ಸುತಗಟ್ಟಿ” ಬಿಜೆಪಿ ಅಧ್ಯಕ್ಷರಾಯ್ಕೆ…!

ಬೆಂಗಳೂರು: ಭಾರತೀಯ ಜನತಾ ಪಕ್ಷ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಿದ್ದು, ಮತ್ತೆ ಮರಳಿ ಜಿಲ್ಲಾಧ್ಯಕ್ಷರಾಗಲು ಪ್ರಯತ್ನ ಪಟ್ಟಿದ್ದ ಬಸವರಾಜ ಕುಂದಗೋಳಮಠ ಅವರಿಗೆ ಹಿನ್ನಡೆಯಾಗಿದೆ.
ಧಾರವಾಡದ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ತಿಪ್ಪಣ್ಣ ಮಜ್ಜಗಿ ಅವರನ್ನ ಆಯ್ಕೆ ಮಾಡಲಾಗಿದ್ದು, ಗ್ರಾಮಾಂತರ ವಿಭಾಗಕ್ಕೆ ಕಲಘಟಗಿ ಕ್ಷೇತ್ರದ ನಿಂಗಪ್ಪ ಸುತಗಟ್ಟಿ ಅವರನ್ನ ಆಯ್ಕೆ ಮಾಡಲಾಗಿದೆ.
ಹಾವೇರಿಗೆ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರನ್ನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.