ಸೆಡ್ಡು ಹೊಡೆದ ಬಿಜೆಪಿ ಕಾರ್ಪೋರೇಟರ್ ಪತಿ: ಪೊಲೀಸರಿದ್ದರೂ ಡೋಂಟ್‌ಕೇರ್- Exclusive videos
ಮೈಸೂರು: ಪತ್ನಿ ಕಾರ್ಪೊರೇಟ್ ಆಗಿರುವ ಏರಿಯಾದಲ್ಲಿ ಪತಿಯ ರೌಡಿಸಂ ನಡೆಸಿದ್ದು, ನ್ಯಾಯ ಕೇಳಿದ ಜನರಿಗೆ ಬೆದರಿಸಿ ಹಲ್ಲೆಗೆ ಯತ್ನಸಿದ್ದಾರೆ. ಪಾಲಿಕೆಯ ಬಿಜೆಪಿ ಸದಸ್ಯೆ ಶಾರದಮ್ಮ ಪತಿ ಈಶ್ವರ್‌ನಿಂದ ಏರಿಯಾದಲ್ಲಿ ಗೂಂಡಾಗಿರಿ ಹೆಚ್ಚಾದ ಘಟನೆ ನಡೆದಿದೆ.
ಮೈಸೂರು ಮಹಾನಗರ ಪಾಲಿಕೆ ವಾರ್ಡ್ 63ರ ಸದಸ್ಯೆ ಶಾರದಮ್ಮನ ಪತಿ ನಿವಾಸಿಗಳ ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸುವ ಜೊತೆಗೆ ಬೀದಿಯಲ್ಲಿ ಬಟ್ಟೆ ಬಿಚ್ಚಿ ಸೆಡ್ಡು ಹೊಡೆದು ರಂಪಾಟ ಮಾಡಿದ ಘಟನೆ ಜೆ.ಪಿ. ನಗರ 20 ನೇ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ.
ಯುಜಿಡಿ ಕಾಮಗಾರಿ ವೇಳೆ ವಿಠ್ಠಲ್ ಎಂಬುವರ ಮನೆ ಎಲೆಕ್ಟ್ರಿಕ್ ಸಿಟಿ ಕೇಬಲ್ ಕಟ್ಟಾಗಿತ್ತು. ತುಂಡಾದ ಕೇಬಲ್ ಸರಿ ಪಡಿಸುವಂತೆ ವಿಠ್ಠಲ್ ಮನೆಯವರಿಂದ ಪದೇ ಪದೇ ಮನವಿ ಮಾಡಿದ್ದರಿಂದ ಕಾರ್ಪೊರೇಟರ್ ಪತಿ ಈಶ್ವರ್ ಕೋಪಗೊಂಡಿದ್ದರು. ಜನಪ್ರತಿನಿದಿಗೆ ಮನವಿ ಮಾಡಿದ್ದಕ್ಕೆ ಧಮ್ಕಿ ಹಾಕಿದ್ದು, ನಿಮ್ಮನ್ನ ನೋಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ರು.
*ಸ್ಥಳದಲ್ಲಿ ಪೊಲೀಸರಿದ್ದರೂ ಡೋಂಟ್‌ಕೇರ್.*
*ಬಟ್ಟೆ ಬಿಚ್ಚಿಕೊಂಡು ಗಲಾಟೆಗೆ ನಿಂತ ಆಸಾಮಿ.*
ಮನೆ ಮುಂದೆ ರೌಡಿಗಳನ್ನು ಕರೆಸಿ ಬೆದರಿಕೆ.
ವೋಟು ಹಾಕಿ ಪತ್ನಿ ಗೆಲ್ಲಿಸಿದ ತಪ್ಪಿಗೆ ಭಯಪಡುತ್ತಿರುವ ಜನ.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಕಾರ್ಪೋರೇಟರ್ ವಿರುದ್ದ ದೂರು ನೀಡಿದ್ರೂ ಕ್ರಮ ಕೈಗೊಳ್ಳದ ಪೊಲೀಸರು