ಕಲಘಟಗಿ “ಬಿಜೆಪಿ ಅವಿಶ್ವಾಸಕ್ಕೆ ಕಾಂಗ್ರೆಸ್ ಕಿಕ್”: ಶಾಸಕ ಸಿ.ಎಂ. ನಿಂಬಣ್ಣನವರ ಮತ ಹಾಕಿ ಕಂಗಾಲು…
1 min readಕಲಘಟಗಿ: ಪಟ್ಟಣ ಪಂಚಾಯತಿಯಲ್ಲಿ ತಮ್ಮದೇ ಪಕ್ಷದ ಅಧ್ಯಕ್ಷನ ವಿರುದ್ಧ ಅವಿಶ್ವಾಸ ಮಾಡಲು ಹೋಗಿ ತಾವೇ ಮಣ್ಣು ಮುಕ್ಕಿದ ಪ್ರಸಂಗವೊಂದು ಬಿಜೆಪಿಯಲ್ಲಿ ನಡೆದಿದ್ದು, ಶಾಸಕ ಸಿ.ಎಂ.ನಿಂಬಣ್ಣನವರಿಗೆ ತೀವ್ರ ಮುಖಭಂಗವಾಗಿದೆ.
ಭಾರತೀಯ ಜನತಾ ಪಕ್ಷದಿಂದಲೇ ಅಧ್ಯಕ್ಷೆಯಾಗಿದ್ದ ಅನಸೂಯಾ ಹೆಬ್ಬಳ್ಳಿಮಠ ಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಹೋಗಿ, ಬಿಜೆಪಿಯೇ ಪೇಚಿಗೆ ಸಿಲುಕಿದ್ದು, ಶಾಸಕ ಸಿ.ಎಂ.ನಿಂಬಣ್ಣನವರ ಮತ ಹಾಕಿದರೂ ಪ್ರಯೋಜನವಾಗಿಲ್ಲ.
ಬಿಜೆಪಿಯ ಅಧ್ಯಕ್ಷೆಯ ಪರವಾಗಿ ಕಾಂಗ್ರೆಸ್ ನಿಂತ ಪರಿಣಾಮ, ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿ ಸೋಲುಂಡಿದೆ. ಈ ಮೂಲಕ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿಯ ಅಧ್ಯಕ್ಷೆಯಿದ್ದರೂ, ಶಾಸಕ ನಿಂಬಣ್ಣನವರ ತಮ್ಮ ಅಸ್ತಿತ್ವ ಕಳೆದುಕೊಂಡತಾಗಿದೆ.
ಅವಿಶ್ವಾಸ ಮಂಡನೆಯ ವಿರುದ್ಧ ಕಾಂಗ್ರೆಸ್ ಮತ ಹಾಕಿದೆ. ಈ ಮೂಲಕ ಪಟ್ಟಣ ಪಂಚಾಯತಿಯ ಅಧಿಕಾರದಲ್ಲಿ ಕೈಯಡಿ ಬಿಜೆಪಿ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಡಿಯಾಗಿದೆ.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಆರ್.ಪಾಟೀಲ, ಅಜಮುತುಲ್ಲಾ ಜಾಗೀರದಾರ, ರಾಮನಗೌಡ ಪಾಟೀಲ, ಸುಧೀರ ಬೊಲ್ಲೂರ, ಕುಮಾರ ಖಂಡೇಕಾರ, ಬಾಳು ಖಾನಾಪುರ, ನರೇಶ ಮಲೆನಾಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.