ಅಣ್ಣಿಗೇರಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದರೂ ಅಧ್ಯಕ್ಷರಾಗುವುದು ಬಿಜೆಪಿಯವರೇ…!!!
1 min readಅಣ್ಣಿಗೇರಿ: ಪುರಸಭೆ ಚುನಾವಣೆಯಲ್ಲಿ ಹೆಚ್ಚು ವಾರ್ಡುಗಳನ್ನ ಕಾಂಗ್ರೆಸ್ ಗೆದ್ದು ಬೀಗಿದರೂ ಪುರಸಭೆಗೆ ಅಧ್ಯಕ್ಷರಾಗುವುದು ಭಾರತೀಯ ಜನತಾ ಪಕ್ಷದಿಂದ ಗೆದ್ದು ಬಂದಿರುವ ಪ್ರತಿನಿಧಿಯೇ ಎನ್ನುವುದು ರೋಚಕವಾಗಿದೆ.
ಪುರಸಭೆಯ ಒಟ್ಟು 23 ವಾರ್ಡುಗಳ ಪೈಕಿ 12ರಲ್ಲಿ ಕಾಂಗ್ರೆಸ್, 6ರಲ್ಲಿ ಪಕ್ಷೇತರರು ಹಾಗೂ 5ರಲ್ಲಿ ಭಾರತೀಯ ಜನತಾ ಪಕ್ಷ ಗೆದ್ದಿದೆ. ಆದರೆ, ಚುನಾವಣೆಯ ಪೂರ್ವದಲ್ಲಿ ಮೀಸಲಾತಿ ಪರಿಶಿಷ್ಟ ಪಂಗಡದವರಿಗೆ ನೀಡಲಾಗಿದೆ.
ಅಣ್ಣಿಗೇರಿ ಪುರಸಭೆಯ 20ನೇ ವಾರ್ಡಿನಿಂದ ಭಾರತೀಯ ಜನತಾ ಪಕ್ಷದ ವೀಣಾ ಸಾತಪ್ಪ ಭೋವಿ ಜಯಗಳಿಸಿದ್ದಾರೆ. ಮೀಸಲಾತಿಯ ಪ್ರಕಾರ ಅವರೇ ಅಧ್ಯಕ್ಷರಾಗಲಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಸೋತರೂ ಮೀಸಲಾತಿಯಿದ್ದ ಕ್ಷೇತ್ರವನ್ನ ಗೆದ್ದಿದ್ದರಿಂದ ಅಧಿಕಾರದ ಚುಕ್ಕಾಣಿ ಅವರಿಗೆ ಲಭಿಸಲಿದೆ.