ತಲ್ವಾರನಿಂದ ಕೇಕ್ ಕತ್ತರಿಸಿದ್ದ “ಸಲಕಿನಕೊಪ್ಪದ ಭೂಪ” ಅಂದರ್…!

ಧಾರವಾಡ: ಧಿಮಾಕಿನಲ್ಲಿ ಬರ್ತಡೇ ಮಾಡಿಕೊಳ್ಳಲು ಹೋಗಿ ಯುವಕನೋರ್ವ ಪೊಲೀಸರ ಪಾಲಾದ ಘಟನೆ ಧಾರವಾಡ ತಾಲೂಕಿನ ಸಲಕಿನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸಲಕಿನಕೊಪ್ಪ ಗ್ರಾಮದ ಪ್ರವೀಣ ಬಸಪ್ಪ ಸಂಧಿಮನಿ ಎಂಬಾತ ತನ್ನ ಸಹೋದರನ ಸಾಯಿ ದಾಬಾದಲ್ಲಿ ಮೂರು ಕೇಕ್ ಗಳನ್ನ ತಲ್ವಾರನಿಂದ ಕತ್ತರಿಸಿದ್ದ. ಅಷ್ಟೇ ಅಲ್ಲ, ಅದನ್ನ ವೀಡಿಯೋ ಮಾಡಿಸಿ, ವೈರಲ್ ಕೂಡಾ ಮಾಡಿಸಿದ್ದಾ.
ವೀಡಿಯೋ ವೈರಲ್ ಆಗಿದ್ದೆ ತಡಾ ಪ್ರವೀಣ ತಡಬಡಿಸಿ, ಕಣ್ಮರೆಯಾಗುವ ಯತ್ನ ಮಾಡಿದ್ದನಾದರೂ, ಪೊಲೀಸರು ಆತನನ್ನ ಕರೆತಂದು ಜೀವನದ ಪಾಠವನ್ನ ಮಾಡಿದ್ದಾರೆ.
ಅಲ್ಲಿಲ್ಲಿ ನೋಡಿದ್ದನ್ನ ಮಾಡಿ, ಮೈ ಪರಚಿಕೊಳ್ಳುವ ಸ್ಥಿತಿಗೆ ಪ್ರವೀಣ ಬಂದಿದ್ದು, ಪೊಲೀಸರು ತಮ್ಮದೇ ಭಾಷೆಯಲ್ಲಿ ಕಾನೂನು ಪಾಠವನ್ನ ಮಾಡಿದ್ದಾರೆ.