Posts Slider

Karnataka Voice

Latest Kannada News

‘161’ ಗಿರಾಕಿಯ ಬರ್ತಡೇಗೆ ಬಾಟಲಿಗಳೇ ಮುಖ್ಯ ಅತಿಥಿ… ರಾತ್ರಿ ‘3’ರ ವರೆಗೆ ಯಾರಿದ್ರೂ ಗೊತ್ತಾ…!?

Spread the love

ಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸವೆಂದು ಕರ್ತವ್ಯಕ್ಕೆ ಬರೋ ಬಹುತೇಕರಲ್ಲಿ ಕೆಲವು ಕಿರಾತಕ ಮನಸ್ಸುಗಳು ಮೋಜು ಮಸ್ತಿಯಲ್ಲಿ ಕಳೆಯುವುದನ್ನ ಕಡಿಮೆ ಮಾಡುತ್ತಿಲ್ಲ. ಅದಕ್ಕೊಂದು ತಾಜಾ ಘಟನೆ ವಾಣಿಜ್ಯನಗರಿಯಲ್ಲಿ ಸದ್ದು ಮಾಡತೊಡಗಿದೆ.

ಪುರಾನಾ ಹವೇಲಿಯಲ್ಲಿರುವ 161 ಗಿರಾಕಿಯೋರ್ವ ತನ್ನ ಬರ್ತಡೇಯನ್ನ ಆಯಕಟ್ಟಿನ ಜಾಗದಲ್ಲಿ ಆಚರಿಸಿಕೊಳ್ಳುತ್ತಾನೆ. ಅಲ್ಲಿಗೆ ಆತನನ್ನ ಬಳಕೆ ಮಾಡಿಕೊಳ್ಳುವ ಮೂರ್ ಸ್ಟಾರ್‌ಗಿಂತ ಹೆಚ್ಚಿನ ಅಧಿಕಾರಿಯು ಬಂದು ತಾಂಬೂಲ ಸ್ವೀಕಾರ ಮಾಡ್ತಾನೆ. ಅಷ್ಟೊಂದು ಪ್ರಭಾವಿ ಪಾಪ ಪಾಂಡು ಆತ.

ನಗರದ ಆಯಕಟ್ಟಿನ ಜಾಗದಲ್ಲಿ ರಾತ್ರಿ ಮೂರು ಗಂಟೆಯವರೆಗೂ “ಗಳಗಂಟಿ” ಗಳ ಶಬ್ಧ ನಿಲ್ಲೋದಿಲ್ಲ. ಬಿಯರ್, ಹಾಟ್ ಬಾಟಲ್‌ಗಳು ಖಾಲಿಯಾಗುತ್ತಲೇ ಇರುತ್ತವೆ. ಸರಕಾರಿ ಕೆಲಸ ದೇವರ ಕೆಲಸದ ನೆಪದಲ್ಲಿ.

ರಾತ್ರಿಯಲ್ಲಿ ಇವರ ಉಪಟಳ ಇನ್ನೂ ಮುಂದುವರೆದಾಗ ಸಂಬಂಧಿಸಿದ ಮೇಲ್ದರ್ಜೆ ಅಧಿಕಾರಿಯ ಗಮನಕ್ಕೆ ತರಲಾಗತ್ತೆ. ಆಗ ಜಾಗವನ್ನ ಬೂಟು ಸಮೇತ ಖಾಲಿ ಮಾಡ್ತಾರೆ. ಹುಬ್ಬಳ್ಳಿ “ಹುಡ್ದಿ” ಆಗೋದು ಅಂದ್ರೇ ಇದೇ ಇರಬೇಕಲ್ವಾ…


Spread the love

Leave a Reply

Your email address will not be published. Required fields are marked *