Posts Slider

Karnataka Voice

Latest Kannada News

ಸತತ ಐದನೇಯ ಬಾರಿಗೆ ಪಂಚಾಯತಿ ಪ್ರವೇಶಿಸಿದ ಭೀಮಪ್ಪ ಕಸಾಯಿ

1 min read
Spread the love

ಧಾರವಾಡ : ತಾಲ್ಲೂಕಿನ ತಡಕೋಡ ಗ್ರಾಮದ ಭೀಮಪ್ಪ ಕಾಸಾಯಿ ಐದನೇ ಬಾರಿ ಗ್ರಾಮ ಪಂಚಾಯತಗೆ ಆಯ್ಕೆಯಾಗುವ ಮೂಲಕ ಗಮನಸೆಳೆದಿದ್ದಾರೆ. 1990 ರಿಂದ ಸತತವಾಗಿ ಅದೇ ವಾಡ್೯ನಿಂದ ಮತ್ತೆ ಪಂಚಾಯತಗೆ ಪ್ರವೇಶ ಪಡೆದಿದ್ದಾರೆ.
ಗ್ರಾಮದಲ್ಲಿನ ರಸ್ತೆ, ಕುಡಿಯುವ ನೀರು, ಇನ್ನಿತರ ಸೌಕರ್ಯಗಳನ್ನು ಜನತೆಗೆ ಕಲ್ಪಿಸುವ ದಿಸೆಯಲ್ಲಿ ಇತರ ಸದಸ್ಯರ ಜೊತೆ ಕಾಸಾಯಿ ಅವರು ಸಹಕರಿಸುತ್ತ ಬಂದಿದ್ದಾರೆ. ಗ್ರಾಮದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡ ಪ್ರವೃತ್ತಿ ಕಾಸಾಯಿವರದ್ದು.ಈ ನಿಟ್ಟಿನಲ್ಲಿ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾತಿ ಪಡೆಯುವಲ್ಲಿ ಯಸ್ವಿಯಾಗಿದ್ದಾರೆ.


ಗ್ರಾಮದ ರೈತರ ಅನುಕೂಲಕ್ಕಾಗಿ ಪಶು ಚಿಕಿತ್ಸಾಲಯವನ್ನು ಗ್ರಾಮಕ್ಕೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದ ದೊಡ್ಡ ಜಲಮೂಲವಾದ ಕೆರೆ ರಕ್ಷಣೆ ಮತ್ತು ಸುಧಾರಣೆಯಲ್ಲಿಯೂ ಕಾಸಾಯಿವರು ತಮ್ಮ ಪ್ರಾಮಾಣಿಕ ಪ್ರಯತ್ನ ಪ್ರದರ್ಶಿಸಿದ್ದಾರೆ. ಗ್ರಾಮದ ಎಲ್ಲ ಸಮುದಾಯ ಮತ್ತು‌ ಸ್ರರದ ಜನರ ಜೊತೆ ಸದಾ ಬೆರೆತು‌ ನಗುಮೊಗದಿಂದ ಸೇವೆ-ಸಹಾಯ ನೀಡುವ ಕಾಸಾಯಿ ಅವರು ಐದನೇ ಬಾರಿಗೂ ಆಯ್ಕೆ ಆಗಿರುವುದರಲ್ಲಿ ಆಶ್ಚರ್ಯವಿಲ್ಲ
ಕಾಸಾಯಿ ಅವರು ಗ್ರಾಮದ ಅಭ್ಯುದಯಕ್ಕೆ ಅಗತ್ಯ ಎಂಬ ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಅರಿತು ಮನಃಪೂರ್ವಕವಾಗಿ ಕೆಲಸ ಮಾಡುವುದಾಗಿ ಕಾಸಾಯಿ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *