ಯರಿಕೊಪ್ಪದ ಬಳಿ ಬೈಕ್ ಸ್ಕಿಡ್: ತಾಯಿ ಸಾವು, ಮಗ ಬಚಾವ್…!

ಧಾರವಾಡ: ತಾಲೂಕಿನ ಯರಿಕೊಪ್ಪದ ಬಳಿ ಬೈಕೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ, ಮಹಿಳೆಯೋರ್ವಳು ಸಾವಿಗೀಡಾಗಿದ್ದು, ಯುವಕನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಯರಿಕೊಪ್ಪ ಗ್ರಾಮದ 46 ವಯಸ್ಸಿನ ಲಕ್ಷ್ಮೀ ಶಂಕರೆಪ್ಪ ಚಿಟ್ಟಿ ಎಂಬುವವರೇ ಘಟನೆಯಲ್ಲಿ ಸಾವಿಗೀಡಾಗಿದ್ದು, ಇವರ ಮಗ ಆನಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಕರಣವನ್ನ ದಾಖಲು ಮಾಡಿಕೊಂಡು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.