ಹುಬ್ಬಳ್ಳಿಯ ಗಲ್ಲಿಗಲ್ಲಿಯಲ್ಲಿ ಬೈಕ್‌ನಲ್ಲಿ ಫೀಲ್ಡಿಗಿಳಿದ ಪೊಲೀಸ್ ಕಮೀಷನರ್ ಶಶಿಕುಮಾರ್…!!!

ಹುಬ್ಬಳ್ಳಿ: ಛೋಟಾ ಮುಂಬೈನಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟಲು ಇಂದು ಪೊಲೀಸ್ ಕಮೀಷನರ್ ಹೊಸದೊಂದು ಮಾರ್ಗವನ್ನ ಅನುಸರಿಸಿ, ಅಚ್ಚರಿ ಮೂಡಿಸುವ ಜೊತೆಗೆ ತಪ್ಪು ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.
ಐಪಿಎಸ್ ಎನ್.ಶಶಿಕುಮಾರ್ ಅವರ ಜೊತೆಗೆ ಡಿಸಿಪಿ ರವೀಶ ಸಿ.ಆರ್ ಸೇರಿದಂತೆ ಬಹುತೇಕ ಅಧಿಕಾರಿಗಳು ಬೈಕಿನಲ್ಲಿ ಕಾರ್ಯಾಚರಣೆ ನಡೆಸಿದರು. ಇದರ ವೀಡಿಯೋ ಇಲ್ಲಿದೆ ನೋಡಿ.
ವಾಣಿಜ್ತನಗರಿಯಲ್ಲಿ ಸಾರ್ವಜನಿಕರ ನೆಮ್ಮದಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಯಾವುದೇ ಪ್ರದೇಶಗಳಲ್ಲಿ ಸಣ್ಣ ಗಲಾಟೆಯು ಆಗದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.