ಧಾರವಾಡದಲ್ಲಿ ಹುಬ್ಬಳ್ಳಿ ಕಳ್ಳನ ಬಂಧನ: 7ಬೈಕ್, ಒಂದು ಕಾರು ವಶಕ್ಕೆ…!
1 min readಧಾರವಾಡ: ಅವಳಿನಗರವೂ ಸೇರಿದಂತೆ ಬೇರೆ ಜಿಲ್ಲೆಗಳಲ್ಲೂ ತನ್ನ ಕೈಚಳಕ ತೋರಿಸಿದ್ದ ಕಳ್ಳನನ್ನ ಬಂಧನ ಮಾಡುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬರೋಬ್ಬರಿ 7ಬೈಕ್, ಒಂದು ಕಾರು ಮತ್ತು 7 ಮೊಬೈಲ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನ ಹಳೇಹುಬ್ಬಳ್ಳಿ ಆನಂದನಗರದ ಆರೂಢ ಕಾಲನಿಯ ಮುಜಮ್ಮಿಲ್ ರಿಯಾಜ್ ಖಾಜಿ ಎಂದು ಗುರುತಿಸಲಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆ, ಹಳೇಹುಬ್ಬಳ್ಳಿ ಠಾಣೆ, ಬೆಳಗಾವಿಯ ಕಿತ್ತೂರು, ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ಮತ್ತು ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳು ಪತ್ತೆಯಾಗಿವೆ.
ಮೂಲತಃ ಪೇಂಟರ್ ಆಗಿರುವ ಮುಜಮ್ಮಿಲ್, ಹೋದ ಕಡೆಗಳಲ್ಲಿ ವಾಹನಗಳನ್ನ ಕದ್ದು ಪರಾರಿಯಾಗುತ್ತಿದ್ದನೆಂದು ಹೇಳಲಾಗಿದೆ.
ಶಹರ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ನೇತೃತ್ವದಲ್ಲಿ ಪಿಎಸ್ಐ ಎಲ್.ಕೆ.ಕೊಡಬಾಳ, ಎಎಸ್ಐ ಪಿ.ಬಿ.ಕಾಳೆ, ಸಿಬ್ಬಂದಿಗಳಾದ ಜಿ.ಜಿ.ಚಿಕ್ಕಮಠ, ಕೆ.ಎ.ಕೊಪ್ಪಳ, ವಿ.ಪಿ.ಕಿಲ್ಲೆದಾರ, ಆರ್.ಎಸ್.ಕಿರಿಜಂತನವರ, ಎಂ.ಎಸ್.ಶಿರಿಗೇರಿ, ಯು.ವೈ.ಸಣ್ಣಿಂಗನವರ, ಲಕ್ಷ್ಮಣ ಲಮಾಣಿ, ಮೌನೇಶ ಚವ್ಹಾಣ, ಪ್ರವೀಣ ದಡೇದ, ವಿ.ಎಸ್.ಕುದರಿ, ಡಿ.ವೈ.ಮನ್ನಿಕೇರಿ, ಮಂಜುನಾಥ ಬಾರಕೇರ, ಬಸವರಾಜ ಕಡಕೋಳ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.