“ಮುಲ್ಲಾ ಡಾಬಾ” ಬಳಿ ಭೀಕರ ಅಪಘಾತ- ಸವಾರ “ಸ್ಪಾಟ್ ಡೆತ್”…

ಧಾರವಾಡ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿನ ಮುಲ್ಲಾ ಡಾಬಾದ ಮುಂದೆ ನಿಂತಿದ್ದ ಲಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದ ಘಟನೆ ಈಗಷ್ಟೇ ನಡೆದಿದ್ದು, ಸವಾರ ಸ್ಥಳದಲ್ಲಿ ದುರ್ಮರಣಕ್ಕೀಡಾಗಿದ್ದಾನೆ.
ವೇಗವಾಗಿ ಬಂದ ಬೈಕ್ ಸವಾರ ತಿರುವಿನಲ್ಲಿ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಮೃತ ಸವಾರನ ಬಗ್ಗೆ ವಿವರಗಳು ಇನ್ನೂ ಲಭ್ಯವಾಗಬೇಕಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮುಲ್ಲಾ ಡಾಬಾದ ಬಳಿ ಸಾಲು ಸಾಲಾಗಿ ಲಾರಿಗಳು ನಿಲ್ಲುತ್ತಿದ್ದು, ಇವುಗಳಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕಿದೆ.