ಕೊರೋನಾ ಸಮಯದಲ್ಲೂ ಬೈಕ್ ಕಳ್ಳನನ್ನ ಹಿಡಿದ ವಿದ್ಯಾಗಿರಿ ಠಾಣೆ ಪೊಲೀಸರು…!
1 min readಧಾರವಾಡ: ಕೊರೋನಾ ವೈರಸ್ ಹೆಚ್ಚುತ್ತಿರುವ ಭಯವನ್ನ ಮೀರಿದ ಕರ್ತವ್ಯ ನಿಷ್ಠೆ ತೋರಿರುವ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಬೈಕ್ ಕಳ್ಳನನ್ನ ಬಂಧನ ಮಾಡಿ, 7 ಬೈಕುಗಳನ್ನ ವಶಕ್ಕೆ ಪಡೆದು, ಶಹಬ್ಬಾಶ್ ಗಿರಿಗೆ ಒಳಗಾಗಿದ್ದಾರೆ.
ಬಂಧಿತ ಆರೋಪಿಯನ್ನ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರ ಗ್ರಾಮದ ಟೇಲರಿಂಗ್ ಕಾರ್ಯನಿರ್ವಹಿಸುವ ಕೃಷ್ಣಾ ಅಲಿಯಾಸ್ ಕಿಟ್ಯಾ ಜ್ಞಾನದೇವ ಮಿರಜಕರ ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗೆ ಧಾರವಾಡದ ಮಾಳಮಡ್ಡಿ ಗೌಳಿಗಲ್ಲಿಯ ಹನಮಂತ ಗುಡಿಯ ಬಳಿಯಲ್ಲಿ ವಾಸವಾಗಿದ್ದ. ಪೊಲೀಸರ ಕಾರ್ಯಾಚರಣೆಯಲ್ಲಿ ಟೇಲರ್ ಬೈಕ್ ಕಳ್ಳ ಎಂಬುದು ಪತ್ತೆಯಾಗಿದೆ.
ಬಂಧಿತ ಆರೋಪಿಯಿಂದ 7 ಬೈಕ್ ಒಂದು ಸ್ಕೂಟರ್ ವಶಕ್ಕೆ ಪಡೆದಿದ್ದು, ಇವುಗಳ ಅಂದಾಜು ಮೌಲ್ಯ 2ವರೆ ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಈತನ ಬಂಧನದಿಂದ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಮಾರ್ಗದರ್ಶನದಲ್ಲಿ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಂ.ಕೆ.ಬಸಾಪೂರ ನೇತೃತ್ವದಲ್ಲಿ ಅಪರಾಧ ವಿಭಾಗದ ಪಿಎಸ್ಐ ಎಸ್.ಆರ್.ತೆಗೂರ, ಪಿಎಸ್‌ಐ(ಕಾವಸು) ಸಚಿನಕುಮಾರ ದಾಸರಡ್ಡಿ, ಎಎಸ್ಐ ಬಿ.ಎಮ್.ಅಂಗಡಿ, ಎಂ.ಎಫ್. ನದಾಫ, ಐ.ಪಿ ಬುರ್ಜಿ, ಆರ್.ಕೆ. ಅತ್ತಾರ, ಬಿ.ಎಮ್.ಪಠಾತ, ಎಮ್.ಜಿ.ಪಾಟೀಲ, ಎಂ.ಸಿ.ಮಂಕಣಿ, ಎಂ.ವಾಯ್.ಮಾದರ, ಡಿ.ಎಸ್.ಸಾಂಗ್ಲಿಕರ ಆರೋಪಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.