Posts Slider

Karnataka Voice

Latest Kannada News

ಹುಬ್ಬಳ್ಳಿ ‘ಒಂದೇ’ ಠಾಣೆಯಲ್ಲಿ 32 ಬೈಕುಗಳಿಗೆ ವಾರಸುದಾರರೇ ಇಲ್ಲಾ…!

Spread the love

ಹುಬ್ಬಳ್ಳಿ: ಉತ್ತರ ಸಂಚಾರಿ ಠಾಣೆಯಲ್ಲಿ ವಶಪಡಿಸಿಕೊಂಡ 32 ಬೈಕುಗಳನ್ನ ಜಪ್ತಿ ಮಾಡಿಕೊಂಡಿದ್ದು, ಅವುಗಳಿಗೆ ವಾರಸುದಾರರೇ ಇಲ್ಲವಾಗಿದ್ದರಿಂದ, ಸಂಚಾರಿ ಠಾಣೆ ಪೊಲೀಸರು ಮಾಲೀಕರಿಗೆ ಸೂಚನೆಯನ್ನ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನಗರದ ವಿವಿಧೆಡೆ ನಿಲ್ಲಿಸಿ ಹೋಗಿರುವ ದ್ವಿಚಕ್ರ ವಾಹನಗಳನ್ನ ಉತ್ತರ ಸಂಚಾರಿ ಠಾಣೆಯಲ್ಲಿ ಇಡಲಾಗಿದೆ. ಸಂಬಂಧಪಟ್ಟ ಮಾಲೀಕರು ಇದ್ದರೇ, ದಾಖಲೆ ತೋರಿಸಿ ತೆಗೆದುಕೊಂಡು ಹೋಗಲು ಪೊಲೀಸರು ಸೂಚನೆ ನೀಡಿದ್ದಾರೆ.

ಉತ್ತರ ಸಂಚಾರಿ ಠಾಣೆಯ ಪಾರ್ಕಿಂಗ್ ಹಾಗೂ ನೋ ಪಾರ್ಕಿಂಗ್ ಜಾಗದಲ್ಲಿಟ್ಟಿದ್ದ 32 ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ. ಇವುಗಳ ಮಾಲೀಕರು 10ದಿನದೊಳಗಾಗಿ ಪೊಲೀಸ್ ಠಾಣೆಗೆ ಸಂಪರ್ಕ ಮಾಡಲು ಕೋರಲಾಗಿದೆ.

ನಿಗದಿತ ಸಮಯದಲ್ಲಿ ಬಾರದೇ ಹೋದರೇ ನ್ಯಾಯಾಲಯದ ಆದೇಶದಂತೆ ಮುಂದಿನ ಕಾನೂನು ಕ್ರಮವನ್ನ ತೆಗೆದುಕೊಳ್ಳಲಾಗುವುದೆಂದು ಪೊಲೀಸರು ಎಚ್ಚರಿಕೆಯನ್ನ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *