ಧಾರವಾಡ: “ಮುಖಕ್ಕೆ ಬಟ್ಟೆ” ಕಟ್ಟಿಕೊಂಡು ಪಲ್ಸರ್ 220 ಕಳ್ಳತನ… CCTVಯಲ್ಲಿ ಸೆರೆ…

ಧಾರವಾಡ: ಎಲ್ಲರೂ ನಿದ್ರೆ ಮಂಪರಿನಲ್ಲಿದ್ದಾಗ ಸಾವಕಾಶವಾಗಿ ಹೆಜ್ಜೆಯಿಡುತ್ತ ಬಂದಿರುವ ಕಿಲಾಡಿ ಕಳ್ಳರು, ಪಲ್ಸರ್ ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಪ್ರಕರಣ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಕಳ್ಳತನದ ಸಿಸಿಟಿವಿ ದೃಶ್ಯಾವಳಿ ಇಲ್ಲಿದೆ ನೋಡಿ..
ಇಬ್ಬರು ಕಳ್ಳರು ಬಂದು ಪಲ್ಸರ್ ಬೈಕಿನ ಹ್ಯಾಂಡಲ್ ಲಾಕ್ ಬಿಡಿಸಿ, ಅಲ್ಲಿಂದ ತೆಗೆದುಕೊಂಡು ಹೋಗುವ ಸಂಪೂರ್ಣವಾದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಘಟನೆಯ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.