ಕುಂದಗೋಳ ಬಳಿ ಬೈಕ್‌ಗಳ ನಡುವೆ ಅಪಘಾತ- ಅರಣ್ಯ ಇಲಾಖೆ ನೌಕರ ದುರ್ಮರಣ…!!!
ಕುಂದಗೋಳ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಅರಣ್ಯ ಇಲಾಖೆಯ ನೌಕರನೋರ್ವ ಸಾವಿಗೀಡಾದ ಘಟನೆ ಪಟ್ಟಣದ ಬಳಿ ಸಂಭವಿಸಿದೆ.
ಬೆನಕನಹಳ್ಳಿ ಗ್ರಾಮದ ಹುಸೇನಸಾಬ ನದಾಫ ಎಂಬಾತನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. ಖಾಸಗಿ ಬ್ಯಾಂಕ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ದಿನಕೂಲಿ ವಾಚಮನ್ ಮಧ್ಯ ಬೈಕ್ ಅಪಘಾತವಾಗಿದೆ.
ಖಾಸಗಿ ಬ್ಯಾಂಕ ಸಿಬ್ಬಂದಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕುಂದಗೋಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.