ಧಾರವಾಡ ಸಾಯಿ ಅರಣ್ಯದ ಬಳಿ- ಚಕ್ಕಡಿಗೆ ಬೈಕ್ ಡಿಕ್ಕಿ: ಸವಾರ ಸಾವು, ತುಂಡಾದ ಚಕ್ಕಡಿ..

ಧಾರವಾಡ: ನಗರದ ಹೊರವಲಯದ ಸಾಯಿ ಅರಣ್ಯ ಹೊಟೇಲ್ ಬಳಿ ಬೈಕ್ ಸವಾರ ವೇಗವಾಗಿ ಬಂದು ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಬುಧವಾರ ಸಂಜೆ ನಡೆದಿದೆ.

ಮೃತ ಯುವಕನನ್ನ ಹುಬ್ಬಳ್ಳಿಯ ಕೇಶ್ವಾಪೂರದ ಸುಂಕದ ಚಾಳ ನಿವಾಸಿ ಸಂತೋಷ ಮಾರುತಿ ತಹಶೀಲ್ದಾರ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಕ್ಕಡಿಯು ಎರಡು ತುಂಡಾಗಿದ್ದು, ಎತ್ತುಗಳಿಗೂ ಗಾಯವಾಗಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.