Big Impact- ಜೆಸಿಬಿ ಜೊತೆಗೆ ಸ್ಥಳಕ್ಕೆ ದೌಡಾಯಿಸಿದ ಮಿಶ್ರಿಕೋಟಿ PDO…

ಕಲಘಟಗಿ: ಸ್ಥಳೀಯರು ಹೇಳಿದ ಕೆಲಸವನ್ನ ಮಾಡದ ಅಧಿಕಾರಿಗಳು ಮಾಧ್ಯಮಗಳಲ್ಲಿ ಬಂದ ತಕ್ಷಣವೇ ಜಾಗೃತರಾಗಿ ಮಾಡುವುದು ಇಂದು ಕೂಡಾ ಸಾಬೀತಾಗಿದ್ದು, ಮಿಶ್ರಿಕೋಟಿ ಗ್ರಾಮದಲ್ಲಿ ಕಾಮಗಾರಿ ಆರಂಭಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ತಮ್ಮದೇ ಕ್ಷೇತ್ರದವರು ಎಂಬ ಪರಿಜ್ಞಾನವೂ ಇಲ್ಲದ ರೀತಿಯಲ್ಲಿ ಪಿಡಿಓಗಳು ವರ್ತನೆ ಮಾಡುತ್ತಿರುವುದೇ ಇಂತಹದಕ್ಕೆ ಕಾರಣವಾಗುತ್ತಿದೆ.
ಕೆಲಸ ಆರಂಭಿಸಿರುವ ವೀಡಿಯೋ…
ಸಾರ್ವಜನಿಕರು ಹೇಳಿದ ತೊಂದರೆಗಳನ್ನ ಬಗೆಹರಿಸದೇ ಸರಕಾರಿ ಸಂಬಳ ಪಡೆಯುವ ಮನಸ್ಸುಗಳು, ಒಮ್ಮೆಯಾದರೂ ತಮ್ಮನ್ನ ತಾವು ಅವಲೋಕನ ಮಾಡಿಕೊಳ್ಳಬೇಕಿದೆ.