ಬಿಗ್ ಬಿ ಸೊಸೆ-ಮೊಮ್ಮಗಳಿಗೂ ಕೊರೋನಾ ಪಾಸಿಟಿವ್: ಜಯಾ ಬಚ್ಚನಗಿಲ್ಲಾ ಪಾಸಿಟಿವ್
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಗೆ ಕೊರೊನಾ ಸೋಂಕು ಇರೋದು ಧೃಡಪಟ್ಟ ಬೆನ್ನಲೇ ನಟಿ ಐಶ್ವರ್ಯಾ ರೈ ಬಚ್ಚನ್ ಗೂ ಹಾಗೂ ಮಗಳು ಆರಾಧ್ಯಗೂ ಕೊರೊನಾ ಸೋಂಕು ಇರೋದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿದೆ.
ಇದೀಗ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಗೂ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಬಿಗ್ ಬಿ ಪತ್ನಿ ಜಯಾ ಬಚ್ಚನ್ ಹೊರತುಪಡಿಸಿ ಅಮಿತಾಬ್ ಬಚ್ಚನ್ ಕುಟುಂಬದವೆರಲ್ಲರಿಗೂ ಕೊರೊನಾ ಸೋಂಕು ಇರೋದು ತಪಾಸಣೆಯಿಂದ ಧೃಡಪಟ್ಟಿದೆ.
ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ನಂದಾ ,ಅವರ ಪುತ್ರಿಯರಾದ ಆಗಸ್ತ್ಯ ಹಾಗೂ ನವ್ಯಾ ನವೇಲಿ ಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಮುಂಬೈನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಬಿಗ್ ಬಿ ಪತ್ನಿ ಜಯಾ ಬಚ್ಚನ್ ಬಿಟ್ಟರೇ ಉಳಿದ ಅಮಿತಾಬ್ ಬಚ್ಚನ್ ,ಮಗ ಅಭಿಷೇಕ್ ,ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯಗೆ ಕೊರೊನಾ ಸೋಂಕು ಇರೋದು ಗೊತ್ತಾಗಿದೆ. ಬಚ್ಚನ್ ಕುಟುಂಬ ವಾಸವಿದ್ದ ಮುಂಬೈನಾ ಜಲ್ಸಾ ಬಂಗಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಇದಕ್ಕೂ ಮೊದಲು ಜಯಾ ಬಚ್ಚನ್ ಹಾಗೂ ಐಶ್ವರ್ಯಾ ರೈ ಹಾಗೂ ಆರಾಧ್ಯಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ರಿಪೋರ್ಟ್ ಬಂದಿತ್ತು. ಮತ್ತೆ ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರೋದು ಧೃಡಪಟ್ಟಿದೆ ಎಂದು ತಿಳಿದು ಬಂದಿದೆ.
ಇನ್ನು ಈಗಾಗಲೇ ಸೋಂಕಿತರಾಗಿರೋ ಬಿಗ್ ಬಿ ಅಮಿತಾಬ್ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಸೋಂಕು ಧೃಡಪಟ್ಟ ಹಿನ್ನಲೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ರು.