ಮದುವೆ ಫಿಕ್ಸ್ ಆಗಿದ್ದ ಯುವಕ: ಅಕಾಲಿಕೆ ಮಳೆಯ ಸಿಡಿಲಿಗೆ ಯುವಕ ಸಾವು

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಹಿಪ್ಪಳಗಾಂವ ಗ್ರಾಮದ ಜಮೀನಿಗೆ ತೆರಳಿದ್ದ ಯುವಕನಿಗೆ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ.
ತನ್ನ ಹೊಲದಲ್ಲಿಯೇ ಕೆಲಸ ಮಾಡುತ್ತಿದ್ದ ಮಾರುತಿ ಅಶೋಕ್ ಸಿಂಗೋಡೆ ಹಟಕಾರ ಎಂಬ ಯುವಕನೇ ಸಾವಿಗೀಡಾಗಿದ್ದಾನೆ. ಕಳೆದ ತಿಂಗಳಷ್ಟೇ ಹೆಣ್ಣು ನೋಡಿಕೊಂಡು ಬಂದಿದ್ದ ಯುವಕನ ಮನೆಯವರು, ಲಾಕ್ ಡೌನ್ ಮುಗಿದ ತಕ್ಷಣವೇ ಮದುವೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದ್ದರು. ಅಷ್ಟರಲ್ಲೇ ಈ ದುರ್ಘಟನೆ ನಡೆದಿದ್ದು, ಮನೆಯವರ ಸ್ಥಿತಿ ಅಯೋಮಯವಾಗಿದೆ. ಕೂಸನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.