Posts Slider

Karnataka Voice

Latest Kannada News

ಭೀಮಾತೀರದಲ್ಲಿ ಲಕ್ಷಾಂತರ ಮೌಲ್ಯದ ಅಫೀಮ: ರಾಜಸ್ಥಾನದವನ ಬಂಧನ

Spread the love

ವಿಜಯಪುರ: ಭೀಮಾತೀರದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ದ್ರವ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಜಯಪುರ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರದ ವಿಜಯಪುರ ಜಿಲ್ಲೆಯ ಗಡಿ ಶಿರಾಡೋಣ ಗ್ರಾಮದ ಹತ್ತಿರ ರಾಜಸ್ಥಾನಕ್ಕೆ ಸೇರಿದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 5 ಲಕ್ಷ ಮೌಲ್ಯದ 12.50 ಕೆಜೆ ಅಫೀಮು ಪುಡಿ ಪೊಲೀಸರು ಜಪ್ತಿ ಮಾಡಿದ್ದಾರೆ. ರಾಜಸ್ಥಾನ ಮೂಲದ ಲಾರಿ ಚಾಲಕ ಸತೀಶ ಚೌಧರಿ ಎಂಬಾತನನ್ನ ಬಂಧನ ಮಾಡಲಾಗಿದೆ.

ವಿಜಯಪುರ ಮೂಲಕ ಬೆಂಗಳೂರಿಗೆ ಅಫೀಮು ಸಾಗಿಸಲಾಗುತ್ತಿತ್ತು. ಇನ್ನು ರಾಜಸ್ಥಾನ, ಮಧ್ಯಪ್ರದೇಶದ ಅಬಕಾರಿ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ವಿಜಯಪುರ ಅಬಕಾರಿ ಡಿಸಿ ಕೆ.ಅರುಣಕುಮಾರ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *