Posts Slider

Karnataka Voice

Latest Kannada News

ಸೋಂಕಿತರಿಗೆ ಸದ್ಗತಿ ನೀಡುತ್ತಿರುವ ಸಂಘಟನೆ: ಮಾನವೀಯತೆಯಡಿಯಲ್ಲಿ ಮಾನವರು

1 min read
Spread the love

ಕೊರೋನಾ ಸೋಂಕಿತ ಮೃತರ ಅಂತ್ಯಸಂಸ್ಕಾರ ಮಾಡುತ್ತಿರುವ ಸಂಘಟನೆ

ಸಂಘಟನೆ ಕಾರ್ಯಕರ್ತರ ಕೆಲಸಕ್ಕೆ ಶಹಬ್ಬಾಸ್‌ಗಿರಿ

ಜನರ‌ ಮನಸ್ಸು ಗೆದ್ದಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳು- ಕಾರ್ಯಕರ್ತರು

ಆಯಾ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನಡೆಸುತ್ತಿರುವ ಸಂಘಟನೆ

ಬಾಗಲಕೋಟೆ: ಮಹಾಮಾರಿ ಕೊರೋನಾ ಸೋಂಕಿಗೆ ಇಡೀ ಜಗತ್ತು ತಲ್ಲಣಿಸಿದೆ. ಸೋಂಕಿನಿಂದ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಲಿದೆ. ಅದರಲ್ಲೂ ಸೋಂಕಿನಿಂದ ಮೃತಪಟ್ಟ ರೋಗಿಯ ಅಂತ್ಯ ಸಂಸ್ಕಾರಕ್ಕೆ, ಸ್ವತಃ ಮೃತರ ಕುಟುಂಬಸ್ಥರೇ ಹಿಂದೇಟು ಹಾಕುತ್ತಿದ್ದಾರೆ. ಅಂಥದರಲ್ಲಿ ಇಲ್ಲೊಂದು ಸಂಘಟನೆ ಕೊರೋನಾ ಸೋಂಕಿನಿಂದ ಮೃತರಾದವರನ್ನ ಅವರವರ ಧರ್ಮದ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ಮಾಡಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಎಲ್ಲಿಯ ಸಂಘಟನೆ.. ಹೇಗೆ ಕೆಲಸ ಮಾಡ್ತಿದೆ ಎಂಬುದನ್ನ ತಿಳಿಬೇಕಾ.. ಹಾಗಾದರೆ ಈ ವರದಿಯನ್ನ ಸಂಪೂರ್ಣವಾಗಿ ನೋಡಿ..


ಮೈಮೇಲೆ ಪಿಪಿಇ ಕಿಟ್, ಮುಖದ ತುಂಬ ಮಾಸ್ಕ ಧರಿಸಿ ಅಂತಿಮ ಸಂಸ್ಕಾರದಲ್ಲಿ ತೊಡಗಿರುವ ಸಂಘಟನೆಯೊಂದರ ಕಾರ್ಯಕರ್ತರು. ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಧರ್ಮದ ವಿಧಿ ವಿಧಾನಗಳನ್ನು ಪೂರೈಸಿ ಅಂತಿಮ‌ ಸಂಸ್ಕಾರ ನೆರವೇರಿಸುತ್ತಿರುವ ಇವರು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಸಾಮಾಜಿಕ ಸಂಘಟನೆಯವರು. ಹೌದು, ಜಮಖಂಡಿ ತಾಲೂಕಿನ ಈ ಸಂಘಟನೆ ಕಳೆದ ಕೆಲವು ದಿನಗಳಿಂದ ಇಂಥ ಮಾನವೀಯತೆಯ ಕಾರ್ಯದಲ್ಲಿ ತಮ್ಮನ್ನ ತೊಡಗಿಸಿಕೊಂಡಿದೆ. ಸಂಘಟನೆಯ ಅಧ್ಯಕ್ಷ ಇಮ್ತಿಯಾಜ ಜಮಾದಾರ ನೇತೃತ್ವದ ತಂಡ ಈ ಕೆಲಸಕ್ಕೆ‌ ಮುಂದಾಗಿರೋದು ಜಿಲ್ಲೆಯ ಜನರ ಪ್ರಶಂಸೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಕೆಲವೆಡೆ ಕೊರೋನಾ ಸೋಂಕಿನಿಂದ ಮೃತರಾದವರನ್ನ ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದವು. ಮೃತರ ಅಂತಿಮ ಸಂಸ್ಕಾರಕ್ಕೆ ಜನರು ಹೆದರುತ್ತಿರುವುದನ್ನ ಅರಿತು, ಈ ಸಂಘಟನೆ ಮೃತರನ್ನ ಮಾನವೀಯತೆ ದೃಷ್ಠಿಯಿಂದ ಅಂತಿಮ ಸಂಸ್ಕಾರ ಮಾಡುತ್ತಿದೆ. ಇದು ಎಲ್ಲರ‌ ಮೆಚ್ಚುಗೆಗೆ ಪಾತ್ರವಾಗಿದೆ. ನಗರಸಭೆಯಿಂದ ಪರವಾನಿಗೆ ಪಡೆದು ಈ ಕಾರ್ಯಕ್ಕೆ ಮುಂದಾಗಿದೆ. ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳುವ ಪ್ರತಿಯೊಬ್ಬರು ಸುರಕ್ಷತೆಗೆ ಬೇಕಾದ ಪಿಪಿಇ ಕಿಟ್ ಸೇರಿದಂತೆ ಎಲ್ಲಾ ಸುರಕ್ಷತೆ ವಸ್ತುಗಳನ್ನ ಸ್ವಂತ ಹಣದಿಂದಲೇ ಖರೀದಿಸಿ ಮೃತದೇಹಗಳ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.
ಕೋರೋನಾದಿಂದ ಮೃತಪಟ್ಟವರನ್ನ ಅಂತ್ಯಸಂಸ್ಕಾರ ಹೇಗೆ ಮಾಡಬೇಕೆಂಬ ಮಾರ್ಗಸೂಚಿ ಕೊಟ್ಟಿದ್ದು, ಅದರಂತೆಯೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮೃತರ ಅಂತ್ಯಸಂಸ್ಕಾರ ಮಾಡುತ್ತಿದೆ ಈ ಸಂಘಟನೆ.

ಇದುವರೆಗೆ ಸೋಂಕಿತ, ಸಾಮಾನ್ಯ ಮತ್ತು ಅನಾಥ ಸೇರಿದಂತೆ ಎಂಟಕ್ಕೂ ಅಧಿಕ ಶವಗಳ ಅಂತ್ಯ ಸಂಸ್ಕಾರವನ್ನ ಮಾಡಲಾಗಿದೆ. ಮೃತರ ಆಯಾ ಧರ್ಮದ ವಿಧಿವಿಧಾನಗಳನ್ನು ಅನುಸರಿಸಿ ಅಂತ್ಯಸಂಸ್ಕಾರ ಮಾಡುತ್ತಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಕೆಲವೆಡೆ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರೇ ಹೆದರುತ್ತಿರುವಾಗ, ಈ ಸಂಘಟನೆ ಮಾಡುತ್ತಿರುವ ಮಾನವೀಯತೆಯ ಕಾರ್ಯಕ್ಕೆ ಒಂದು ಸೆಲ್ಯೂಟ ಹೇಳಲೇಬೇಕಲ್ಲವೇ..

ವರದಿ: ಆರ್.ಶೇಖರ


Spread the love

Leave a Reply

Your email address will not be published. Required fields are marked *

You may have missed