ಠಾಣೆ ಪೊಲೀಸರಿಗೆ ಸಿಗದವರು ಸಿಸಿಬಿ ಪೊಲೀಸರ ಬಲೆಗೆ: ಇದು ಪೊಲೀಸಗಿರಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ದಾಳಿ ಮಾಡಿ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಉದಯಗಿರಿ ಹತ್ತಿರದ ಚಿರಾಯು ಹೋಟೆಲ್ ಬಳಿ ಅರ್ಜುನ ನೆಲವಡಿ ಹಾಗೂ ವೀರೇಶ ಯಲಿಗಾರ ಇವರಿಬ್ಬರೂ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ದಾಳಿಯನ್ನು ಮಾಡಿದ್ದಾರೆ.
ಇನ್ನು ಆರೋಪಿಗಳಿಂದ ಬೆಟ್ಟಿಂಗ್ ಗಾಗಿ ಬಳಸುತ್ತಿದ್ದ 2 ಮೊಬೈಲ್ ಹಾಗೂ 11700 ನಗದನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ್ ಮುಲ್ಲಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ ಐ ಶಿವರಾಜ, ಪ್ರಕಾಶ ಸೋಗಿ, ಎಚ್ ವಿ ಗಾಣದಾಳ, ಬಸವರಾಜ ಸಣ್ಣಪ್ಪನವರ, ಅನಿಲ ಹುಗ್ಗಿ, ಸಂತೋಷ ಇಚ್ಛಂಗಿ, ಎಂ ಕೆ ಅಕ್ತರ, ಆರ್ ಎಸ್ ಗುಂಜಾಳ, ಡಿ.ಎನ್. ಗುಂಡಗೈ, ಎಸ್ ಎಚ್,ಕೆಂಪೂಡಿ, ವಿ.ಆರ್. ಮರೆಪ್ಪನವರ್, ಶಿವರಾಜ ಸೋಲಂಕಿ , ಎಸ್.ಪಿ. ಲಮಾಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.