ಲಿಂಗಸುಗೂರಲ್ಲಿ ಬೆಟ್ಟಿಂಗ್: ಮೂವರ ಬಂಧನ- ಸಿಕ್ಕಿದೇನು ಗೊತ್ತಾ..!
ರಾಯಚೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಎಲೆವಲ್ ಪಂಜಾಬ ನಡುವಿನ ಪಂದ್ಯದ ಸಮಯದಲ್ಲಿ ಬೆಟ್ಟಿಂಗನಲ್ಲಿ ತೊಡಗಿದ್ದ ಮೂವರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರ ಬೂಪೂರು ಗ್ರಾಮದಲ್ಲಿ ಬೆಟ್ಟಿಂಗನಲ್ಲಿ ತೊಡಗಿದ್ದ ಚನ್ನಬಸಪ್ಪ, ರಮೇಶ ಹಾಗೂ ಅಂಬಣ್ಣ ಎಂಬುವವರನ್ನ ಬಂಧನ ಮಾಡಲಾಗಿದೆ.
ಮೊಬೈಲ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಬಂಧಿತರಿಂದ 4300ರೂಪಾಯಿ ಹಣ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿಯೂ ಮೊಬೈಲ್ ಮೂಲಕ ನಡೆಯುತ್ತಿದ್ದ ಈ ದಂಧೆಯನ್ನ ಜಾಣಾಕ್ಷತನದಿಂದ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದಲ್ಲಿಯೂ ನಡೆಯುತ್ತಿದ್ದ ಈ ಪಿಡುಗನ್ನ ಹತೋಟಿಗೆ ತರಲು ಪ್ರಯತ್ನ ನಡೆಸಿದ್ದಾರೆ.