ಹಳೇ ಮುಖ ಸದಾನಂದ ಬದ್ದಿ- ಹೊಸಬ ಪಾರಸಮಲ್: ಸಿಕ್ಕಿದ್ದು ಬರೋಬ್ಬರಿ 628500 ನಗದು..!

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಕೆಂಪಗೇರಿಯಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೇತನಾ ಕಾಲೋನಿ ನಿವಾಸಿ ಧರ್ಮೇಂದ್ರ ಚೌಧರಿ, ಕೇಶ್ವಾಪುರದ ಸದಾನಂದ ಬದ್ದಿ, ಜೆಸಿ ನಗರದ ಪಾರಸಮಲ್ ರಾಠೋಡ ಬಂಧಿತರಾಗಿದ್ದು, ಪೊಲೀಸರಿಗೆ ಸಿಗದ ಹಾಗೇ ದಂಧೆ ನಡೆಸುತ್ತಿದ್ದರೆಂದು ತಿಳಿದು ಸಿಸಿಬಿ ದಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಹಳೇಹುಬ್ಬಳ್ಳಿಯ ಖಾಲಿ ಜಾಗದಲ್ಲಿ ಐಪಿಲ್ ಸನ್ ರೈಸರ್ ಹೈದ್ರಾಬಾದ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್, ತಂಡಗಳ ನಡುವಿನ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರ ದಾಳಿ ನಡೆಸಿದ್ದಾರೆ. ಬಂಧಿತರಿಂದ ಬರೋಬ್ಬರಿ 628500 ನಗದನ್ನು ವಶಪಡಿಸಿಕೊಂಡಿದ್ದು ಈ ಸಂಬಂಧ ಹಳೇಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ಠಾಣೆಗೆ ಪೊಲೀಸರಿಗೆ ಸಿಗದ ದಂಧೆಕೋರರು ಸಿಸಿಬಿ ಮತ್ತು ಸಿಸಿಐಬಿ ಪೊಲೀಸರಿಗೆ ಸಿಗುತ್ತಿರುವುದು ಸೋಜಿಗದ ವಿಷಯವಾಗಿದೆ.