Posts Slider

Karnataka Voice

Latest Kannada News

ಬುಕ್ಕಿಗಳಿಬ್ಬರ ಬಂಧನ- ಹೆಚ್ಚಾಗುತ್ತಿದೆ ಐಪಿಎಲ್ ಬೆಟ್ಟಿಂಗ್

1 min read
Spread the love

ರಾಯಚೂರು: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಪಂಧ್ಯದ  ಸಮಯದಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಕ್ರಿಕೆಟ್ ಬುಕ್ಕಿಗಳಿಬ್ಬರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಯಚೂರಿನ ದೇವದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿ, ಕ್ರಿಕೆಟ್ ಬುಕ್ಕಿಗಳಾದ ಶ್ರೀನಿವಾಸ್  ಮತ್ತು ರಮೇಶ್ ಎಂಬಿಬ್ಬರನ್ನ ಬಂಧನ ಮಾಡಲಾಗಿದ್ದು, ಬಂಧಿತರಿಂದ 5300ರೂ., ಎರಡು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.

ದೇವದುರ್ಗ ತಾಲೂಕು ಸೇರಿದಂತೆ ಹಲವು ಪ್ರದೇಶಗಳಿಂದ ಲೈನ್ ಮೂಲಕ ಬೆಟ್ಟಿಂಗ್ ಶುರು ಮಾಡಿದ್ದು, ಈ ಜೋಡಿಗಳು ಇತ್ತೀಚೆಗೆ ತಾಲೂಕು ಪ್ರಮುಖ ಗ್ರಾಮಗಳಿಂದಲೂ ಬೆಟ್ಟಿಂಗ್ ಹಿಡಿಯಲು ಆರಂಭಿಸಿದ್ದರು.

ಖಚಿತ ಮಾಹಿತಿಯ ಮೇರೆಗೆ ಜಾಲ ಬೀಸಿದ ದೇವದುರ್ಗ ಪೊಲೀಸ್ ಠಾಣೆ ಸಿಬ್ಬಂದಿಗಳು, ಆರೋಪಿಗಳನ್ನ ಹಿಡಿದು  ಪ್ರಕರಣ ದಾಖಲು ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *