ಬೆಟ್ಟಿಂಗ್- ಆರು ಲಕ್ಷದ ಜೊತೆಗೆ 6ಜನರ ಬಂಧನ
ಬೆಂಗಳೂರು: ಕೊರೋನಾ ಹಾವಳಿಯ ನಡುವೆಯೂ ಆರಂಭಗೊಂಡಿರುವ ಇಂಡಿಯನ್ ಪ್ರಿಮೀಯರ್ ಲೀಗ್ ಪಂಧ್ಯಗಳು ಬಿರುಸಾಗಿ ನಡೆಯುತ್ತಿರುವಾಗಲೇ ಬೆಟ್ಟಿಂಗ್ ದಂಧೆಯೂ ನಡೆಯುತ್ತಿದೆ.
ಐಪಿಎಲ್ ಸೀಸನ್ ಶುರುವಾಯ್ತು ಅಂದ್ರೆ ಬೆಟ್ಟಿಂಗ್ ದಂಧೆಯೂ ಶುರುವಾಯ್ತು ಅಂತಲೇ ಅರ್ಥ. ಕೇವಲ ಬೆಟ್ಟಿಂಗ್ ನಿಂದಲೇ ವಿಶ್ವಾದ್ಯಂತ ಕೋಟಿ ಕೋಟಿ ಹಣದ ಹೊಳೆ ಹರಿಯುತ್ತೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.
ಇದೀಗ ಶುರುವಾಗಿರೋ ಐಪಿಎಲ್ ಪಂದ್ಯಗಳಿಗೂ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಜಸ್ತಾನ ರಾಯಲ್ಸ್ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡಗಳು ಮ್ಯಾಚ್ ನಡೆಯುತ್ತಿದ್ದಾಗ ಇಲ್ಲಿ ಬೆಟ್ಟಿಂಗ್ ನಡೆಯುತ್ತಿತ್ತು.
ಬಾಣಸವಾಡಿ ಮತ್ತು ಮಲ್ಲೇಶ್ವರಂ ನಲ್ಲಿ ನಡೆಯುತ್ತಿದ್ದ ಬೆಟ್ಟಿಂಗ್ ದಂಧೆಯಲ್ಲಿ ಒಟ್ಟು ಆರು ಜನ ಆರೋಪಿಗಳನ್ನ ಬಂಧನ ಮಾಡಲಾಗಿದ್ದು, ಬಂಧಿತರಿಂದ 6 ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ.