“ನಾನ್ ಮಾಡಿದ್ದ ಅನ್ಬೇಡಿ” ‘ನರಕಯಾತನೆ’ಗೆ ಪರಿಹಾರ: ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ಶ್ರಮ ಸಾರ್ಥಕ
ಧಾರವಾಡ: ಕಳೆದ ಐದು ವರ್ಷಗಳಿಂದ ಬಗೆಹರಿಯಲಾರದ ಸಮಸ್ಯೆಗೆ ಕೇವಲ ಒಂದೇ ತಿಂಗಳೊಳಗಾಗಿ (15 ದಿನಗಳೊಳಗಾಗಿ) ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟ ರಾಜ್ಯ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಹಾಗೂ ಅವರ ತಂಡದ ಶ್ರಮ ಸಾರ್ಥವಾಗಿದ್ದು, ಮಹದೇವ ಮಾಳಗಿಯವರ ಪತ್ನಿಯವರಿಗೆ ಮಾನ್ಯ ಮುಖ್ಯ ಮಂತ್ರಿಗಳು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರಿ ನೌಕರಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಮಹದೇವ ಮಾಳಗಿ ಕಳೆದ ಐದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಸರಕಾರದ ಸೌಲಭ್ಯಗಳು ಕೂಡ ಸಿಗದೇ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುತ್ತಿತ್ತು. ಇದನ್ನ ಗಮನಿಸಿದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಮಾಳಗಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆ ಸರಕಾರದ ಕಣ್ಣು ತೆರೆಸುವಲ್ಲಿ ಪ್ರಯತ್ನ ಮಾಡಿದ್ರು.
ಅಶೋಕ ಸಜ್ಜನರ ಪ್ರಯತ್ನವೀಗ ಸಾರ್ಥಕವಾಗಿದೆ. ಶಿಕ್ಷಕರ ದಿನಾಚರಣೆಯ ದಿನವೇ ಮಹದೇವ ಮಾಳಗಿಯವರಿಗೆ ಸ್ವಯಂ ನಿವೃತ್ತಿ ನೀಡಲು ಸರಕಾರ ಒಪ್ಪಿಗೆ ನೀಡಿದ್ದು, ಇಂದು ಕೂಡಾ ಇದಕ್ಕೆ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಧನಂಜಯ ಷರಾ ಹಾಕಿದ್ದಾರೆ.
ಯಾವುದೇ ಪ್ರಚಾರಕ್ಕೆ ಹೋಗದೇ ಕಾರ್ಯ ಸಾಧನೆ ಮಾಡಿ ತೋರಿಸಿದ್ದಾರೆ ಅಶೋಕ ಸಜ್ಜನ. ಮಾಳಗಿಯವರಿಗೆ ನಿವೃತ್ತಿ ನೀಡಿದರೆ ಸಾಲದು, ಪತ್ನಿಯವರಿಗೆ ನೌಕರಿ ಕೊಡಬೇಕು ಅವರ ಬಾಕಿ ಹಣ ತಕ್ಷಣ ಮಂಜೂರಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಆದರೆ, ಇದೇ ವಿಷಯವನ್ನ ಕೇಳಲು ಸಮಯವಿಲ್ಲವೆಂದಿದ್ದ ಕೆಲವರು, ಇದನ್ನ ತಾವೇ ಸರಿ ಮಾಡಿಸಿದ್ದೇವೆ ಎಂದು ಹೇಳಿಕೊಳ್ಳುವ ಪ್ರಯತ್ನಕ್ಕೆ ಇಳಿದಿದ್ದು, ಗಿಡ ನೆಡುವವರು ಒಬ್ಬರು ಹಣ್ಣು ತಿನ್ನುವವರು ಒಬ್ಬರು ಎನ್ನುವಂತಾಗಿದೆ. ಮಾಳಗಿಯವರ ಕುಟುಂಬದ ಜೊತೆಗೆ ನೇರವಾಗಿ ನಿಂತು ಅವರಿಗೊಂದು ಉತ್ತಮ ಬದುಕು ಮಾಡಿಸಬೇಕೆಂಬ ಒಲವು ಹೊಂದಿರುವ ಅಶೋಕ ಸಜ್ಜನರಿಗೆ ಸಾವಿರಾರೂ ಶಿಕ್ಷಕರು ಬೆಂಬಲವಾಗಿ ನಿಂತಿದ್ದಾರೆ.
ಷಡಕ್ಷರಿಯವರೇ ನೀವೇ ಸ್ವಯಂ ನಿವೃತ್ತಿ ಕೊಡಿಸಲು ಸಫಲರಾಗಿದ್ದರೇ ಅವರ ಪತ್ನಿಯವರಿಗೆ ನೌಕರಿಯನ್ನ ಕೊಡಿಸುವ ಧೈರ್ಯ ತೋರಿಸಿ ಎಂದು ವ್ಯಂಗ್ಯವಾಡಿದ್ದಾರೆ.
ಮಾಳಗಿಯವರಿಗೆ ಐದು ವರ್ಷದ ಬಾಕಿ ಹಣವನ್ನ ಮಂಜೂರು ಮಾಡಬೇಕು. ಈ ಕುಟುಂಬಕ್ಕೆ ಸಂಪೂರ್ಣ ನ್ಯಾಯ ಸಿಗುವವರೆಗೂ ಗ್ರಾಮೀಣ ಶಿಕ್ಷಕರ ಸಂಘ ವಿಶ್ರಮಿಸುವುದಿಲ್ಲವೆಂಬುದನ್ನ ಅಶೋಕ ಸಜ್ಜನ ಸ್ಪಷ್ಟಪಡಿಸಿದ್ದಾರೆ.