ದಾಖಲೆಗಳ ಜೊತೆ ಬಿಇಓ ನಾಪತ್ತೆ…!
1 min readಕೊಪ್ಪಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದಲ್ಲಿ ಕಳೆದ ಎರಡು ವಾರಗಳ ಹಿಂದೆ ನಡೆದ ಎಸಿಬಿ ದಾಳಿಗೂ ಮುನ್ನ ನಾಪತ್ತೆಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು 13ದಿನಗಳಿಂದ ನಾಪತ್ತೆಯಾಗಿದ್ದಾರೆ. ಸರಕಾರಿ ದಾಖಲೆ ಹಾಗೂ ಸರಕಾರಿ ಮೊಬೈಲ್ ನಂಬರ ತೆಗೆದುಕೊಂಡು ಹೋಗಿದ್ದರಿಂದ ಸಿಬ್ಬಂದಿ ಪರದಾಡುವಂತಾಗಿದೆ.
ಶಾಲೆಯೊಂದರ ಲೈಸನ್ಸ್ ರದ್ದುಗೊಳಿಸಿ ಡಿಪಾಸಿಟ್ ಹಣವನ್ನ ಪಡೆಯುವುದಕ್ಕಾಗಿ ಲಂಚ ಕೇಳಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿಯಾಗಿತ್ತು. ಆ ಕಾರಣದಿಂದಲೇ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ.
ಎಸಿಬಿ ದಾಳಿಯ ನಂತರ ಆಪರ್ ಆಯುಕ್ತ ನಳೀನ್ ಅಕುಲ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಎಸ್ ಡಿಸಿ ಅರುಂಧತಿ ಎಂಬುವವರನ್ನ ಅಮಾನತ್ತುಗೊಳಿಸಿ ಆದೇಶ ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಬಿಇಓ ಉಮಾದೇವಿಯವರನ್ನ ಎಸಿಬಿ ಅಧಿಕಾರಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ, ಇನ್ನೂಸಿಗದೇ ಇರುವುದು ಸೋಜಿಗ ಮೂಡಿಸುತ್ತಿದೆ.