ಶಾಲೆಯಲ್ಲಿ ‘ಮದುವೆ ವಾರ್ಷಿಕೋತ್ಸವ’ ಹುಬ್ಬಳ್ಳಿ ಬಿಇಓಗೆ ಸಾಮಾನ್ಯ ಜ್ಞಾನದ ಕೊರತೆ….!?

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಮಾಜ ಹೇಗಿದ್ದರೇ ಚೆನ್ನ, ಹೇಗಿದ್ದರೆ ರನ್ನ ಎಂದು ಹೇಳಿಕೊಡಬೇಕಾದ ಅಧಿಕಾರಿಗಳೇ ಪ್ರಚಾರದ ಹುಚ್ಚಿಗಾಗಿ ಕಂಡ ಕಂಡ ಶಾಲೆಗಳಲ್ಲಿ ಮದುವೆಯ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.ಹುಬ್ಬಳ್ಳಿ ಗ್ರಾಮೀಣ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕಕುಮಾರ ಸಿಂಧಗಿ ಎಂಬುವವರು ತಮ್ಮ ನೈತಿಕತೆಯನ್ನ ಬದಿಗಿಟ್ಟು, ಶಾಲೆಯೊಂದರಲ್ಲಿ ಕೇಕ್ ಕತ್ತರಿಸಿ ತಮ್ಮ ಮದುವೆಯ ವಾರ್ಷಿಕೋತ್ಸವವನ್ನ ಆಚರಿಸಿಕೊಂಡಿದ್ದಾರೆ.

ಮಕ್ಕಳ ಸಮ್ಮುಖದಲ್ಲಿಯೇ ಇಂತಹದನ್ನ ಮಾಡುವಾಗ ಕೊನೆಪಕ್ಷ ಸಾಮಾಜಿಕ ಅಂತರವಾಗಲಿ, ಮಾಸ್ಕನ್ನ ಧರಿಸುವುದನ್ನ ಮಾಡವುದಾಗಲಿ ಮಾಡದೇ ಇರುವುದು ‘ಶಾಣ್ಯಾರ ದಡ್ಡತನ’ವನ್ನ ಪ್ರದರ್ಶನ ಮಾಡುವಂತಿದೆ.
ಇಂತಹ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಕ್ತವಾದ ಕ್ರಮವನ್ನ ಜರುಗಿಸಬೇಕೆಂದು ಜ್ಞಾನವಂತರೂ ಒತ್ತಾಯಿಸಿದ್ದಾರೆ.