ಧಾರವಾಡದ “ಬಿಇಓ ಕಚೇರಿ”ಯಲ್ಲಿ ಕುಡುಕ ಸಿಬ್ಬಂದಿಯ ಕಿರಿಕಿರಿ…
1 min readಧಾರವಾಡ: ಉತ್ತಮ ಸಮಾಜದ ಭರವಸೆ ಮೂಡಿಸುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಸಿಬ್ಬಂದಿಯೋರ್ವ ಮದ್ಯ ಸೇವಿಸಿ, ಮಹಿಳಾ ಸಿಬ್ಬಂದಿಗಳು ಕಚೇರಿಯಲ್ಲಿ ನಿಲ್ಲದ ವಾತಾವರಣ ಸೃಷ್ಟಿಸಿ ಮಹಿಳಾ ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಗೊತ್ತಾಗಿದೆ.
ನಗರದ ಪ್ರಮುಖ ಸ್ಥಳದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರುವ ಸಿಬ್ಬಂದಿ, ಬಹುತೇಕವಾಗಿ ಜ್ಯುಬಲಿ ಸರ್ಕಲ್ ಹಾಗೂ ಕೋರ್ಟ್ ವೃತ್ತದ ಬಳಿಯಿರುವ ಬಾರ್ ನಲ್ಲಿ ಹೆಚ್ಚಿಗೆ ಸಮಯ ಕಳಿಯುತ್ತಿದ್ದಾನೆಂದು ಗೊತ್ತಾಗಿದೆ.
ಮರ್ಯಾದೆಯನ್ನ ಉಳಿಸಿಕೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿರುವ ಕುಡುಕ ಸಿಬ್ಬಂದಿ ಹಾವಳಿಯನ್ನ ಪ್ರಜ್ಞಾವಂತ ಬಿಇಓ ಕೊನೆಗಾಣಿಸಬೇಕಿದೆ. ಇಲ್ಲದಿದ್ದರೇ, ಧಾರವಾಡದಲ್ಲಿ ಬಿಇಓ ಕಚೇರಿ ಮಾನ ಹರಾಜಾಗುವುದರಲ್ಲಿ ಯಾವುದೇ ಸಂಶಯವಿಲ್ಲ.