ಶಾಲೆ ಬಾಡಿಗೆಗೆ ಕೊಟ್ಟ ‘HM’ಗೆ ನೋಟೀಸ್: ‘ಕೆವಿ’ ಇಂಪ್ಯಾಕ್ಟ್…

ಧಾರವಾಡ: ನಗರದ ಪ್ರಮುಖ ಸ್ಥಳದಲ್ಲಿರುವ ಸರಕಾರಿ ಶಾಲೆಯನ್ನೇ ‘ಗೋಬಿ ಮಂಚೂರಿ’ಗೆ ಬಾಡಿಗೆಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಯ ಮುಖ್ಯಾಧ್ಯಾಪಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಕರ್ನಾಟಕವಾಯ್ಸ್.ಕಾಂ ನಿನ್ನೆಯಷ್ಟೇ ಈ ಬಗ್ಗೆ ವೀಡಿಯೋ ಸಮೇತ ವರದಿಯನ್ನ ಪ್ರಕಟಿಸಿತ್ತು. ಅದರ ವೀಡಿಯೋ ಇಲ್ಲಿದೆ ನೋಡಿ..
ಸರಕಾರಿ ಉರ್ದು ಶಾಲೆ ಸಂಖ್ಯೆ 1 ರ ಮುಖ್ಯಾಧ್ಯಾಪಕ ಎಸ್.ಎ.ಫೀರಜಾದೆಯವರಿಗೆ ನೋಟೀಸ್ ನೀಡಲಾಗಿದೆ ಎಂಬ ಮಾಹಿತಿಯನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿಯವರು ನೀಡಿದ್ದಾರೆ. ಅಷ್ಟೇ ಅಲ್ಲ, ಬಾಡಿಗೆಯ ಬಗ್ಗೆ ಬಿಇಓ ಅವರ ಪರವಾನಿಗೆ ಇರುವುದಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ.
ಯಾವುದೇ ಶಾಲೆಯ ಶಿಕ್ಷಕರು ಇಂತಹದಕ್ಕೆ ಮುಂದಾಗಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು, ಶಿಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.