ಸಂವಿಧಾನವನ್ನ ಬರೆದಿದ್ದು ‘ಡಾ.ಅಂಬೇಡ್ಕರ ಅಲ್ಲವೆಂದ’ ಬಿಇಓ ವಿರುದ್ಧ ದೂರು…!
1 min readಬ್ರಹ್ಮಾವರ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಬಗ್ಗೆ ಅಗೌರವ ತೋರಿದ್ದಲ್ಲದೇ ಬ್ಯಾಹ್ಮಣ ಶ್ರೇಷ್ಠತೆಯನ್ನ ಎತ್ತಿ ಹಿಡಿಯಬೇಕೆಂಬ ದುರುದ್ದೇಶದಿಂದ ವಾಟ್ಸಾಪ್ ಸಂದೇಶಗಳನ್ನ ಕಳುಹಿಸಿರುವ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಪರಿಶಿಷ್ಟ/ ಪರಿಶಿಷ್ಠ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಪೊಲೀಸ್ ಠಾಣೆಗೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ ‘ಪ್ರೌಡ ಟು ಬಿ ಬ್ರಾಹ್ಮಿನ್’ ಎಂಬ ತಲೆಬರಹದ ಅಡಿಯಲ್ಲಿ ‘ಡಾ.ಬಾಬಾಸಾಹೇಬರು ಒಬ್ಬರೇ ಸಂವಿಧಾನವನ್ನು ಬರೆದಿಲ್ಲ. ಬೆನಗಲ್ ನರಸಿಂಹ ರಾವ ಅವರು ಸಂವಿಧಾನವನ್ನ ಬರೆದಿರುವುದು ಎಂಬ ವಿಷಯಗಳನ್ನು ಲಿಖಿತ ರೂಪದಲ್ಲಿ ಚರ್ಚಿಸುತ್ತ ಬ್ರಾಹ್ಮಣರೇ ಶ್ರೇಷ್ಠರು ಎಂದು ಪ್ರತಿಪಾದಿಸಲು ಹೊರಟು ಅಂಬೇಡ್ಕರ ಅವರಿಗೆ ಅಗೌರವ ತೋರಿಸಿದ್ದಾರೆಂದು ದೂರಲಾಗಿದೆ.
ತಮ್ಮ ವಿಚಾರಗಳನ್ನ ಮಂಡಿಸಿ, ನೂರಾರು ಜನರಿರುವ ಬ್ರಹ್ಮಾವರ ಕನ್ನಡ ಭಾಷಾ ಶಿಕ್ಷಕರ ವಾಟ್ಸಾಪ್ ಗ್ರೂಪಿನಲ್ಲಿ ಸಂದೇಶವನ್ನ ಹರಿಬಿಡಲಾಗಿದೆ. ತಾವೊಬ್ಬ ಸರಕಾರಿ ನೌಕರ ಎನ್ನುವ ಜ್ಞಾನವೂ ಇಲ್ಲದೇ ಹೀಗೆ ಮಾಡಿದ್ದು, ಶಿಕ್ಷಕ ಸಮುದಾಯಕ್ಕೆ ತಪ್ಪು ದಾರಿಯನ್ನ ಪ್ರತಿಪಾದಿಸಿದಂತಾಗಿದೆ. ಇಂತವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ದಲಿತ ಚಿಂತಕ ನಾರಾಯಣ ಮಣ್ಣೂರು, ಶ್ಯಾಮರಾಜ ಬಿರ್ತಿ, ಪರಮೇಶ್ವರ ಉಪ್ಪೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.