ಬಡ್ತಿ ಕೊಡ್ತೀದ್ದೀರಿ: ಹೊಸ ತಾಲೂಕುಗಳಿಗೆ ಬಿಇಓ ನೇಮಕ ಮಾಡಿ: ಗ್ರಾಮೀಣ ಸಂಘದ ಮನವಿ
ಧಾರವಾಡ: ಸರಕಾರಿ ಪ್ರೌಢ ಶಾಲಾ ಮುಖ್ಯ ಗುರುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಮಯದಲ್ಲಿ ನೂತನ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇಮಕ ಮಾಡುವ ಮೂಲಕ ಹುದ್ದೆಗಳ ಭರ್ತಿ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಒತ್ತಾಯಿಸಿದೆ.
ಈ ಬಗ್ಗೆ ಸಚಿವ ಸುರೇಶಕುಮಾರ ಅವರಿಗೆ ಮನವಿ ಮಾಡಿಕೊಂಡಿರುವ ಸಂಘದ ಪದಾಧಿಕಾರಿಗಳು ಹಾಗೂ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ನೂತನ ತಾಲೂಕುಗಳಿಗೆ ಬಿಇಓ ನೇಮಕ ಮಾಡುವುದರಿಂದ ಶಿಕ್ಷಣಕ್ಕೆ ಮತ್ತಷ್ಟು ಒತ್ತು ಸಿಗಲಿದೆ ಎಂದು ಹೇಳಿದ್ದಾರೆ.
ಸಂಘದ ಮನವಿ ಪತ್ರ ಇಲ್ಲಿದೆ ನೋಡಿ..
ಗೆ,
ಮಾನ್ಯ ಶ್ರೀ ಸುರೇಶಕುಮಾರ್ ರವರು
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
ವಿಧಾನ ಸೌಧ. ಬೆಂಗಳೂರು 01
ಮಾನ್ಯರೆ,
ವಿಷಯ:- ದಿನಾಂಕ 01-10-2020 ರಂದು ಜರುಗುವ ಸರ್ಕಾರಿ ಪ್ರೌಢಶಾಲಾ ಮುಖ್ಯ ಗುರುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ವೃಂದಕ್ಕೆ ಬಡ್ತಿ ಪ್ರಕ್ರಿಯೆಯಲ್ಲಿ ನೂತನ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ಮನವಿ..
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ರಿ ಹುಬ್ಬಳ್ಳಿ ವತಿಯಿಂದ ತಮ್ಮಲ್ಲಿ ವಿನಂತಿಸುವುದೇನೆಂದರೆ ನೂತನ ತಾಲೂಕುಗಳಿಗೆ ಶೈಕ್ಷಣಿಕ ಆಡಳಿತ ಹಾಗೂ ನಿರ್ವಹಣೆ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅತ್ಯಂತ ಅವಶ್ಯಕವಾಗಿದೆ ಮತ್ತು ಈಗಾಗಲೇ ನಾವು ಹಲವು ಬಾರಿ ಮನವಿ ಮಾಡಿ ನೂತನ ೪೯ ತಾಲೂಕುಗಳಿಗೆ ಸಾರ್ವಜನಿಕ ಹಿತಾಸಕ್ತಿ ಶಿಕ್ಷಣದ ಆಡಳಿತ ಇನ್ನಷ್ಟು ಸುಲಲಿತವಾಗಿ ನಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹುದ್ದೆ ಮಂಜೂರು ಮಾಡುವಂತೆ ತಮ್ಮಲ್ಲಿ ವಿನಂತಿಸಿದ್ದೇವೆ
ತಾವುಗಳು ಕೂಡ ನೂತನ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಹುದ್ದೆ ಮಂಜೂರು ಮಾಡಲು ಉತ್ಸುಕತೆ ಹೊಂದಿದ್ದು ಇಲಾಖೆಗೆ ಲಭ್ಯವಿರುವ ಸಂಪನ್ಮೂಲ ಬಳೆಸಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭಿಸುವಂತೆ ಟಿಪ್ಪಣಿ ಬರೆದಿರುವುದು ಸಂತಸದ ಸಂಗತಿಯಾಗಿದೆ. ಹೀಗಾಗಿ ದಯವಿಟ್ಟು ಶೈಕ್ಷಣಿಕ ಚಟುವಟಿಕೆಗಳ ನಿರಂತರತೆ ಹಾಗೂ ಶೈಕ್ಷಣಿಕ ಆಡಳಿತ ಹಾಗೂ ನಿರ್ವಹಣೆ ಉದ್ದೇಶದಿಂದ ದಿನಾಂಕ 01-10-2020 ರಂದು ನಡೆಯುವ ಪ್ರೌಢ ಶಾಲಾ ಮುಖ್ಯ ಗುರುಗಳ ಹುದ್ದೆಯಿಂದ ಶಿಕ್ಷಣಾಧಿಕಾರಿಗಳ ಹುದ್ದೆ ಬಡ್ತಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ನೂತನ ತಾಲೂಕುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಹಾಗೂ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಖಾಲಿ ಇರುವ ವಯಸ್ಕರ ಶಿಕ್ಷಣ ಶಿಕ್ಷಣಾಧಿಕಾರಿಗಳ ಖಾಲಿ ಹುದ್ದೆಗಳನ್ನು ತೋರಿಸುವಂತೆ ತಮ್ಮಲ್ಲಿ ಸಮಸ್ತ ಗುರುಬಳಗದ ಪರವಾಗಿ ವಿನಂತಿಸುತ್ತೇವೆ.
ಗೌರವಾನ್ವಿತ ವಂದನೆಗಳೊಂದಿಗೆ